Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಮಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ! ರುಂಡ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು

ಮಂಗಳೂರು: ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ರುಂಡ ಮತ್ತು ದೇಹದ ಭಾಗವನ್ನು ಬೇರ್ಪಡಿಸಿ ರುಂಡವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವ ಭಯಾನಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕದ್ರಿ ಪಾರ್ಕ್ ಸಮೀಪ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕ ಹೆಲ್ಮೆಟ್ ಇಟ್ಟು ಹೋಗಿದ್ದ. ಅದಾಗಿ ತುಸು ಹೊತ್ತಿನಲ್ಲೇ ಅಲ್ಲೇ ಸಮೀಪದಲ್ಲಿ ರಕ್ತಸಿಕ್ತವಾಗಿದ್ದ ಗೋಣಿಚೀಲವೊಂದು ಸಿಕ್ಕಿದ್ದು ಅದರಲ್ಲಿ ಹೆಲ್ಮೆಟ್ ಸಮೇತವಾಗಿದ್ದ ಅನಾಮಧೇಯ ಮಹಿಳೆಯ ರುಂಡ ಪತ್ತೆಯಾಗಿತ್ತು.

ಚೀಲದಲ್ಲಿ ಮಹಿಳೆಯ ರುಂಡ ಇರುವುದನ್ನು ಕಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.

ಇದಾಗಿ ಒಂದು ಗಟೆಯ ತರುವಾಯ ನಗರದ ಕೋಟಿ ಚೆನ್ನಯ್ಯ ವೃತ್ತ ಸಮೀಪ ರುಂಡವಿಲ್ಲದ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ. ಪತ್ತೆಯಾಗಿರುವ ದೇಹ ಹಾಗೂ ಮಹಿಳೆಯ ತಲೆ ಒಂದೇ ವ್ಯಕ್ತಿಯದೆಂದು ಪೋಲೀಸರು ಶಂಕಿಸಿದ್ದಾರೆ.

ಹತ್ಯೆಯಾದ ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ. ಕದ್ರಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

No Comments

Leave A Comment