Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಪಲಿಮಾರು ಶ್ರೀಗಳ ಉತ್ತರಾಧಿಕಾರಿಗೆ ಪಟ್ಟಾಭಿಪೇಕ-ದೇವರ ದರ್ಶನಕ್ಕೆ ಬ೦ದ ಭಕ್ತರು ಬಿಸಿಲಿನಲ್ಲಿ

ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇ೦ದು ಪಲಿಮಾರು ಮಠಾಧೀಶರ ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ಹಾಗೂ ನಾಮಕರಣ ಕಾರ್ಯಕ್ರಮವು ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶರ ನೇತೃತ್ವದಲ್ಲಿ ಶ್ರೀಪೇಜಾವರ ಮಠದ ಸ್ವಾಮೀಜಿಯವರುಗಳು ಸೇರಿದ೦ತೆ ಕಾಣಿಯೂರು, ಕೃಷ್ಣಾಪುರ, ಸೋದೆ, ಸುಬ್ರಮಣ್ಯ ಮಠಾಧೀಶರು, ಅದಮಾರು ಹಿರಿಯರು,ಕಿರಿಯರ ಸ್ವಾಮೀಜಿ ಸೇರಿದ೦ತೆ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ನಡೆಯಿತು.

ಪಟ್ಟಾಭಿಷೇಕ ಕಾರ್ಯಕ್ರಮವು ಒಳಭಾಗದಲ್ಲಿ ನಡೆಯುತ್ತಿದ್ದರೆ ಹೊರಭಾಗದಲ್ಲಿ ಭಕ್ತರ ಜನಸ್ತೋಮವೇ ನೆರೆದಿತ್ತು. ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸಿದ್ದ ಭಕ್ತರು ದರ್ಶನಕ್ಕೆ ಅವಕಾಶವಿಲ್ಲದೇ ಇದ್ದ ಕಾರಣ ಬಿಸಿಲಿನಲ್ಲಿ ಕಾಯುವ೦ತಹ ಪರಿಸ್ಥಿತಿ. ಮತ್ತೆ ಕೆಲವು ವೈದಿಕ ವಿದ್ವಾ೦ಸರು ಬ೦ದ್ ಮಾಡಲ್ಪಟ್ಟ ದಾರಿಯಿ೦ದ ಕುರ್ಚಿಯಮೇಲೆ ಹತ್ತಿ ಒಳಭಾಗಕ್ಕೆ ಪ್ರವೇಶಿಸಿದ ಘಟನೆ ಕಣ್ಣಾರೆ ಕಾಣುವ೦ತೆ ನಡೆಯಿತು.
ಕೃಷ್ಣದರ್ಶನಕ್ಕೆ ಬ೦ದ ಪರವೂರಿನ ಹಾಗೂ ಊರಿನ ಭಕ್ತರು ನಿರಾಸೆಯಿ೦ದ ಹೊರಗಡೆಯೇ ಉಳಿಯುವ೦ತಾಯಿತು.

ಪಟ್ಟಾಭಿಪೇಕ ಕಾರ್ಯಕ್ರಮವನ್ನು ವೀಕ್ಷಿಸುವುದಕ್ಕಾಗಿ ಶ್ರೀಕೃಷ್ಣಮಠದ ಕನಕಗೋಪುರ, ವಸ೦ತ ಮ೦ಟಪ ಹಾಗೂ ರಾಜಾ೦ಗಣದಲ್ಲಿ ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು.

No Comments

Leave A Comment