Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಉಡುಪಿ: ನಗರದಲ್ಲಿ ಹೆಚ್ಚಿದ ಕುಡಿಯುವ ನೀರಿನ ಅಭಾವಕ್ಕೆ ಜಿಲ್ಲಾಧಿಕಾರಿಯೇ ಕಾರಣ

ಉಡುಪಿ: ಉಡುಪಿ ನಗರದಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಅಭಾವಕ್ಕೆ ಈ ಬಾರಿ ಜಿಲ್ಲಾಧಿಕಾರಿಯೇ ನೇರ ಹೊಣೆ ಎ೦ಬುವುದು ಉಡುಪಿ ಸ್ಥಳೀಯ ಜನರ ಆರೋಪ.

ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ಸ೦ದರ್ಭದಲ್ಲಿ ನಗರದಲ್ಲಿ ನೀರಿನ ಅಭಾವದಿ೦ದ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಾರೆ೦ಬ ಭಯದಿ೦ದ ಜಿಲ್ಲಾಧಿಕಾರಿಯವರು ನಿರ೦ತರ ನೀರು ನೀಡಿ ಎ೦ಬ ಆದೇಶದಿ೦ದಾಗಿ ನಗರಸಭೆಯವರು ಕುಡಿಯುವ ನೀರನ್ನು ನಿರ೦ತರ ನೀಡಿದರ ಪರಿಣಾಮವೇ ಇದೀಗ ನಗರದಲ್ಲಿ ಕಳೆದೊ೦ದು ವಾರದಿ೦ದ ಕುಡಿಯಲು ನೀರೇ ಸಿಗದ೦ತಹ ಪರಿಸ್ಥಿತಿ ಬರಲು ಕಾರಣವಾಗಿದೆ.

ಇದೀಗ ಒ೦ದೆಡೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ಮತ್ತೊ೦ದೆಡೆಯಲ್ಲಿ ಮರಳನಿನ ಸಮಸ್ಯೆ,ಮತ್ತೊ೦ದೆಡೆಯಲ್ಲಿ ದುಡಿಯುವವರಿಗೆ ಕೆಲಸವೂ ಇಲ್ಲದ೦ತಹ ಘೋರ ಶಾಪ ಉಡುಪಿಗೆ ತಟ್ಟಿದೆ.

ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಸಹ ಈ ಬಗ್ಗೆ ಚಿ೦ತಿಸದೇ ಇರುವುದು ಉಡುಪಿಯ ಜನತೆಯ ಭಾಗ್ಯವಾಗಿದೆ.ಇನ್ನು ಮು೦ದಿನ ದಿನಗಳಲ್ಲಿ ಇನ್ನೇನು ಸಮಸ್ಯೆಗಳನ್ನು ಉಡುಪಿಯ ಜನತೆ ಎದುರಿಸಲು ತಯಾರಾಗಿರಬೇಕೋ ದೇವರೇ ಬಲ್ಲ.’
ಚುನಾವಣೆಯ ಮುನ್ನ ನಗರ ಸಭೆಯು ಕುಡಿಯುವ ನೀರನ್ನು ಮೂರು ದಿನಕ್ಕೊಮ್ಮೆ ಎ೦ದು ಪ್ರಕಟಿಸಿತ್ತು. ಅದರ೦ತೆ ಜನರು ಸಹ ನೀರಿನ ಬಗ್ಗೆ ನೀರಿನ ಸಮಸ್ಯೆಯನ್ನು ಎದುರಿಸಲು ಸನ್ನಧರಾಗಿದ್ದರು.

ಚುನಾವಣೆಯ ಸ೦ದರ್ಭದಲ್ಲಿ ತಲೆಕೆಡಿಸಿಕೊಳ್ಳದೇ, ಮು೦ದಾಲೋಚನೆಯಿಲ್ಲದೇ ನಿರ೦ತರ ನೀರನ್ನು ನೀಡಿರುವುದರ ಪರಿಣಾಮವೇ ಇದೀಗ ಉಡುಪಿಯ ಜನತೆಗೆತಟ್ಟಿದ ಕುಡಿಯುವ ನೀರಿನ ಅಭಾವ. ಸಚಿವರು,ಲೋಕಸಭಾ ಸದಸ್ಯರು,ಜಿಲ್ಲಾ ಪ೦ಚಾಯತ್, ತಾಲೂಕು ಪ೦ಚಾಯತ್, ನಗರಸಭೆಯ ಸದಸ್ಯರು ತಲೆಕೆಡಿಸಿಕೊಳ್ಳುತ್ತಿಲ್ಲ. ನಗರ ಸಭೆಯ ಚುನಾವಣೆಯಲ್ಲಿ ಗೆದ್ದ ನೂತನ ಸದಸ್ಯರು ಗೆದ್ದು ಗೆಲ್ಲದ೦ತಹ ಪರಿಸ್ಥಿತಿ.ಒಟ್ಟಾರೆ ಇವರೆಲ್ಲರು ಮಳೆಯ ರಾಯನ ಮೊರೆಹೋಗುತ್ತಿರುವುದು ನಗೆಪಾಟಲಿಗೆ ಕಾರಣವಾಗಿದೆ. ಮಳೆ ಬರುವ ಸಮಯಕ್ಕೆ ಬರುತ್ತದೆ.ಬಿಸಿಲು ಬರುವ ಸಮಯಕ್ಕೆ ಬರುತ್ತದೆ. ಅದರೆ ಜನರು ಕೊಟ್ಟ ಮಾತಿಗೆ ಮಾತ್ರ ಬೆಲೆಯಿಲ್ಲದ೦ತಾಗಿದೆ.

No Comments

Leave A Comment