Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಮೈಸೂರು: ಗೆಳೆಯನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ದೂರು ದಾಖಲು

ಮೈಸೂರು: ಆಘಾತಕಾರಿ ಘಟನೆಯಲ್ಲಿ, ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಆರು ಜನರ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. ಈ ಕುರಿತಂತೆ ದೂರು ದಾಖಲಾಗಿದ್ದು ಇದಾಗಲೇ ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡ ರಚಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ಮೈಸೂರಿನ ಹೊರವಲಯದ ಲಿಂಗಾಂಬುಧಿ ಪಾಳ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು ತಡರಾತ್ರಿ ಇಬ್ಬರೂ ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶದಲ್ಲಿ ಸಂಧಿಸಿದ್ದರು. ಅಲ್ಲೇ ಇಬ್ಬರೂ ಮಾತನಾಡಿಕೊಳ್ಳುತ್ತಿರುವಾಗ ಅದೇ ಸ್ಥಳದಲ್ಲಿ ಕಾರೊಂದರಲ್ಲಿ ಕುಳಿತಿದ್ದ ಆರು ಮಂದಿ ಮದ್ಯಸೇವನೆ ನಡೆಸಿದ್ದರು. ಮೊದಲಿಗೆ ಈ ಆರೂ ಮಂದಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕನ ಹಣೆಗೆ ಕಲ್ಲಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಅವನ ಕೈಗಳಿಗೆ ಸಹ ಹಾನಿಮಾಡಿದ್ದಾರೆ. ಬಳಿಕ ಆರೂ ಮಂದಿ ಯುವತಿಯ ಮೇಲೆ ಮುಗಿಬಿದ್ದು ಸಾಮೂಹಿಕ ಅತ್ಯಾಚಾರನಡೆಸಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದು ಯುವಕ, ಯುವತಿ ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No Comments

Leave A Comment