Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್‌ ಕಾರಿನಲ್ಲಿ 1.13 ಲಕ್ಷ ರೂ. ನಗದು ಪತ್ತೆ; ವಶ

ಘಟಾಲ್‌ (ಪಶ್ಚಿಮ ಬಂಗಾಲ) : ಈ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಂತೆಯೇ ಪೊಲೀಸರು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್‌ ಅವರ ಕಾರಿನಲ್ಲಿ 1.13 ಲಕ್ಷ ರೂ. ನಗದು ಇರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಘೋಷ್‌ ಅವರ ಕಾರಿನಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಪ್ರಯಾಣಿಸುತ್ತಿದ್ದರು. ಪಶ್ಚಿಮ ಮಿಡ್ನಾಪುರದ ಪಿಂಗಳ ಪ್ರದೇಶದಲ್ಲಿ ಮಂಗಳಾ ಬಾರ್‌ ಸಮೀಪ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ಶೋಧ ಕಾರ್ಯ ನಡೆಸಿದರು.

“ಘೋಷ್‌ ಕಾರಿನಲ್ಲಿ 1,13,815 ರೂ. ನಗದು ಇತ್ತು. ಕಾರಿನಲ್ಲಿ ಇತರ ಕೆಲವರೂ ಇದ್ದರು. ನಗದನ್ನು ಏಕೆ ಒಯ್ಯಲಾಗುತ್ತಿದೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಘೋಷ್‌ ವಿಫ‌ಲರಾದರು. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು.

No Comments

Leave A Comment