Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಶ್ರೀಶೈಲೇಶ ಉಪಾದ್ಯಾ ಸನ್ಯಾಸ ಧೀಕ್ಷೆ

ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ, ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬ್ಲಕಟ್ಟ ‘ಶ್ರೀಶೈಲೇಶ ಉಪಾದ್ಯಾಯ’ ಎಂಬ ವಟುವಿಗೆ ಬ್ರಾಹ್ಮಮುಹೂರ್ತದಲ್ಲಿ ಬೆಳಿಗ್ಗೆ 03.57  ಗಂಟೆಗೆ   ಪ್ರಣವೋಪದೇಶಪುರಸ್ಸರ  ಸನ್ಯಾಸ ಧೀಕ್ಷೆಯನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೀಡಿದರು. ಪೂರ್ವಭಾವಿಯಾಗಿ ಶಾಕಲ ಹೋಮ,ಜಾಗರಣೆಯ ಸಮಯದಲ್ಲಿ ಭಾಗವತ ಶ್ರವಣ,ವಿರಜಾ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿಗಳನ್ನು ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಹಾಗೂ ವೈಧಿಕ ವೃಂದದವರು ನಡೆಸಿ ಕೊಟ್ಟರು.ಈ ಸಂದರ್ಭದಲ್ಲಿ ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೀಶ ಆಚಾರ್ಯ,ರಾಜಗೋಪಾಲ ಆಚಾರ್ಯ,ವಾಸುದೇವ ಉಪಾಧ್ಯಾಯ,ಗಿರೀಶ ಉಪಾಧ್ಯಾಯ ಮತ್ತು ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment