Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಬಂಟ್ವಾಳ: ಟಿಪ್ಪರ್‌ಗೆ ಬುಲೆಟ್‌ ಮುಖಾಮುಖಿ ಢಿಕ್ಕಿ; ಇಬ್ಬರ ಸಾವು

ಬಂಟ್ವಾಳ: ಟಿಪ್ಪರ್ ಗೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಬುಲೆಟ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಅಣ್ಣಳಿಕೆ ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಸಂಭವಿಸಿದೆ.

ಮೃತರು ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ, ಬೈಕ್ ಸವಾರ ಸುರೇಂದ್ರ (33), ಸಹ ಸವಾರಿಯಾಗಿದ್ದ ಮೃತರ ಸಂಬಂಧಿ ಜಯಲಕ್ಷ್ಮೀ (36) ಎನ್ನುವವರಾಗಿದ್ದಾರೆ.

ಕೊಡಿಯಾಲ್‌ಬೈಲ್‌ಗೆ ತೆರಳುತ್ತಿದ್ದಾಗ ಕರ್ಪೆಯಿಂದ ಬರುತ್ತಿದ್ದ ಟಿಪ್ಪರ್ ಢಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವಾಗಕೊನೆಯುಸಿರೆಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಟ್ವಾಳ ಟ್ರಾಫಿಕ್ ಎಸ್ಸೈ ಮಂಜುನಾಥ್, ಎಎಸ್ಸೈ ಎಂ.ಕೆ.ಕುಟ್ಟಿ ಸೇರಿ ಪೊಲೀಸರು ಸ್ಥಳಕೆಕ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment