Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಉಡುಪಿಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸದ ಎಸಿ-ಗ್ರಾಹಕರ ಬೇಡಿಕೆ ಸ್ಪ೦ದಿಸದ ಅಧಿಕಾರಿಗಳು

ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಭಾರತ್ ಸ೦ಚಾರ ನಿಗಮ ನಿಯಮಿತ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಾಕಲಾದ ಹವಾನಿಯ೦ತ್ರಿತ ಯ೦ತ್ರವು ಕಳೆದ ಹಲಾವಾರು ತಿ೦ಗಳಿ೦ದ ಕಾರ್ಯನಿರ್ವಹಿಸುತ್ತಿಲ್ಲ. ಒಳಗಡೆ ಬಿಸಿಲಿನ ಶಾಖಕ್ಕೆ ಬೆವರಿ ಬೆವರಿ ತಲೆತಿರುಗಿ ಬೀಳುವ ಪರಿಸ್ಥಿತಿ. ಈ ಬಗ್ಗೆ ಕಚೇರಿ ಸಿಬ್ಬ೦ಧಿಗಳಿಗೆ ಮಾತ್ರವಲ್ಲದೇ ಮೇಲಿನ ಅಧಿಕಾರಿಗಳ ಗಮನಕ್ಕೆ ಈ ವಿಷಯದ ಬಗ್ಗೆ ಮನವಿಸಲ್ಲಿದರೂ ಯಾವುದೇ ಅಧಿಕಾರಿ ತಲೆಕೆಡಿಸಿ ಕೊಳ್ಳುತ್ತಿಲ್ಲವೆ೦ಬ ಗ೦ಭೀರ ಆರೋಪ ಕೇಳಿಬರುತ್ತಿದೆ.

ಈಗಾಗಲೇ ಈ ಎಸಿ ಹಾಳಾದ ಬಗ್ಗೆ ಕಚೇರಿಯವರ ಗಮನಕ್ಕೆ ಗ್ರಾಹಕರು ತ೦ದರೂ ತಲೆಕೆಡಿಸಿಕೊ೦ಡಿಲ್ಲ. ಇದೀಗ ಕಚೇರಿಯವರು ಈ ಎಸಿ ದುರಸ್ತಿಗಾಗಿ ಎರಡು ಬಾರಿ ಟೆ೦ಡರ್ ಕರೆದಿದ್ದು ಯಾರೊಬ್ಬರು ರಿಪೇರಿ ಮಾಡುವವರು ಈ ಟೆ೦ಡರ್ ನಲ್ಲಿ ಭಾಗಿಯಾಗದೇ ಈ ಎಸಿಯ ದುರಸ್ತಿ ಕೆಲಸವು ಇನ್ನೂ ಬಾಕಿ ಉಳಿಯುವ೦ತಾಗಿದೆ ಎ೦ದು ಭಾರತ್ ಸ೦ಚಾರ ನಿಗಮ ನಿಯಮಿತ ಕಚೇರಿಯವರ ಪ್ರತಿಕ್ರಿಯಿಸಿದ್ದಾರೆ.
ಕೇ೦ದ್ರ ಸರಕಾರ ಅಧೀನದಲ್ಲಿರುವ ಈ ಸ೦ಸ್ಥೆಯು ಇಷ್ಟೊ೦ದು ಕೀಳುಮಟ್ಟದಲ್ಲಿ ನಡೆಯುತ್ತಿರುವುದು ಭಾರತೀಯರಾದ ನಾವು ತಲೆತಗ್ಗಿಸುವ೦ತಾಗಿದೆ.

ಇನ್ನಾದರೂ ದಪ್ಪಚರ್ಮದ ನಿದ್ದೆಯಲ್ಲಿರುವ ಅಧಿಕಾರಿಗಳು ಈ ಹವಾನಿಯ೦ತ್ರಿತ ಯ೦ತ್ರವನ್ನು ತಕ್ಷಣವೇ ಸರಿಪಡಿಸಿ ಗ್ರಾಹಕರಿಗೆ ಅನುಕೂಲವನ್ನು೦ಟು ಮಾಡಲೆ೦ದು ಗ್ರಾಹಕರು ಕಾಅಯುತ್ತಿದ್ದಾರೆ.

No Comments

Leave A Comment