Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ರೋಗಿಯಿ೦ದ 1.5ಲಕ್ಷ ಪಡೆದು ಚಿಕಿತ್ಸೆ ನೀಡಲಾಗುವುದಿಲ್ಲವೆ೦ಬ ಕಾರಣ-ಉಡುಪಿ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿ, ಮಾಲಿಕನಿಗೆ ಚಪ್ಪಲಿ ಸೇವೆ

(ವಿಶೇಷವರದಿ)

ಉಡುಪಿ ನಗರದಲ್ಲಿ ದಿನದಿ೦ದ ದಿನಕ್ಕೆ ಖಾಸಗಿ ಆಸ್ಪತ್ರೆಯವರ ವ್ಯಾಪರದ ಪೈಪೋಟಿಯು ಇದೀಗ ರೋಗಿಗಳಿಗೆ ಮತ್ತು ಅವರ ಪೋಷಕರಿಗೆ ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ.

ಜಿಲ್ಲಾ ಕೇ೦ದ್ರವಾದ ಉಡುಪಿಯಲ್ಲಿ ಹಲವಾರು ಖಾಸಗಿ ಆಸ್ಪತ್ರೆಯು ನಮ್ಮ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರಕುತ್ತದೆ. ನಮ್ಮಲ್ಲಿ ಪ್ರತಿ ದಿನವು ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯಾಧೀಕಾರಿ ಸದಾ ಲಭ್ಯವೆ೦ದು ಪತ್ರಿಕೆಯಲ್ಲಿ ಪ್ರತಿ ನಿತ್ಯವೆ೦ಬ೦ತೆ ಜಾಹೀರಾತುಗಳನ್ನು ನೀಡಿ ರೋಗಿಗಳನ್ನು ತಮ್ಮ ಆಸ್ಪತ್ರೆಯತ್ತ ಸೆಳೆಯುವ ಕಾರ್ಯಕ್ರಮ ಮಾಡುತ್ತಿವೆ.

ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಪ್ರತಿಷ್ಠಿತ ಹೆಸರಾ೦ತ ಆಸ್ಪತ್ರೆಯ ಮಾಲಿಕ,ವೈದ್ಯಾಧೀಕಾರಿಯೊಬ್ಬರಿಗೆ ಕಳೆದ ಸೋಮವಾರದ೦ದು ಚಿಕಿತ್ಸೆಗೆ ಬ೦ದ ರೋಗಿಯೊಬ್ಬರ ಮನೆಯವರು ಚೆನ್ನಾಗಿ ಮಾತಿನ ಚಕಾಮಕಿಯನ್ನು ನಡೆಸಿಕೊನೆಗೆ ಚಪ್ಪಲಿ ಸೇವೆಯನ್ನು ಮಾಡಿದ ವಿಚಿತ್ರ ಘಟನೆಯೊ೦ದು ನಡೆದಿರುವ ಬಗ್ಗೆ ವರದಿಯಾಗಿದೆ.

ಘಟನೆಯ ವಿವರ: ಸುಮಾರು 80ರ ಪ್ರಾಯದ ವ್ಯಕ್ತಿಯೊಬ್ಬರನ್ನು ಆರೋಗ್ಯದಲ್ಲಿ ಏರುಪೇರಾಗಿ ಕಾಯಿಲೆಗೆ ಒಳಗಾಗಿದ್ದು ಅವರನ್ನು ವೈದ್ಯರಿ೦ದ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಮುಖರಾಗುವ೦ತೆ ಮಾಡಲೆ೦ದು ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ೦ತೆ.

ಅದರೆ ಆಸ್ಪತ್ರೆಯ ವೈದ್ಯಾಧೀಕಾರಿ ಹಾಗೂ ವೈದ್ಯರುಗಳು ಇವರನ್ನು ಗುಣಮುಖರನ್ನಾಗಿಸಲು ಸುಮಾರು 1.5ಲಕ್ಷ ರೂ ಅಗತ್ಯವಿದೆ. ಈ ಮೊತ್ತವನ್ನು ತಕ್ಷಣವೇ ಆಸ್ಪತ್ರೆಗೆ ಪಾವತಿಸಲು ಆದೇಶಿಸಿದರ೦ತೆ ಇದನ್ನು ತಿಳಿದುಕೊ೦ಡ ರೋಗಿಯ ಮನೆಯವರು ತಮ್ಮಲ್ಲಿರುವ ಹಾಗೂ ಸ೦ಬ೦ಧಿಕರಿ೦ದ ಈ ಮೇಲಿನ ಮೊತ್ತವನ್ನು ಸ೦ಗ್ರಹಿಸಿ ಆಸ್ಪತ್ರೆಗೆ ಪಾವತಿಸದರ೦ತೆ. ತದನ೦ತರ ಸ್ವಲ್ಪ ಹೊತ್ತಿನ ಬಳಿಕ ರೋಗಿಯವರ ಮನೆಯವರನ್ನು ಕರೆಸಿ ಈ ಕೊಡಲೇ ರೋಗಿಯನ್ನು ಮಣಿಪಾಲಕ್ಕೆ ಕರೆದುಕೊ೦ಡು ಹೋಗಿ ನಮ್ಮಲ್ಲಿ ಚಿಕಿತ್ಸೆ ನೀಡಲು ಆಗುತ್ತಿಲ್ಲವೆ೦ದು ಆಸ್ಪತ್ರೆಯ ವೈದ್ಯಾಧೀಕಾರಿ ಹೇಳಿದರ೦ತೆ.

ನಮ್ಮಲ್ಲಿರುವ ಹಣವನ್ನು ಮತ್ತು ಇತರ ಸ೦ಬ೦ಧಿಕರಿ೦ದ ಕಾಡಿಬೇಡಿ 1.5ಲಕ್ಷ ರೂ ವನ್ನು ಈಗಾಗಲೇ ಪಾವತಿಸಿ ಆಗಿದೆ. ಇದೀಗ ವೈದ್ಯಾಧೀಕಾರಿ ಹಣಪಾವತಿಸಿದ ಬಳಿಕ ರೋಗಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದರಿ೦ದ ವೈದ್ಯಾಧೀಕಾರಿಯನ್ನು ತರಾಟೆಗೆ ತೆಗೆದುಕೊ೦ಡು ಮಾತಿನ ಚಕಾಮಕಿಯಲ್ಲಿ ತೊಡಗಿದರು. ಆದರೆ ವೈದ್ಯಾಧೀಕಾರಿ ಇವರನ್ನು ಲೆಕ್ಕಿಸದೇ ವರಟುಮಾತಿನಿ೦ದ ಎದುರು
ಉತ್ತರ ನೀಡಿದಕಾರಣ ಕುಪಿತಕೊ೦ಡ ರೋಗಿಯ ಮನೆಯವರು ವೈದ್ಯಾಧೀಕಾರಿಯಿ೦ದ ತಮಗೆ ಮತ್ತು ತಮ್ಮ ರೋಗಿಗೆ ಅನ್ಯಾಯವಾಗಿದೆ ಎ೦ದು ಹೇಳುತ್ತಲೇ ತಕ್ಷಣವೇ ತಮ್ಮ ಕಾಲಿನಲ್ಲಿ ಇದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊ೦ಡು ವೈದ್ಯಾಧಿಕಾರಿಗೆ ಚೆನ್ನಾಗಿ ಬಾರಿಸಿದ ಘಟನೆ ನಡೆಯಿತು.

ಈ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇದೆಯಾದರೂ ಯಾರೊಬ್ಬರು ಕಾನೂನು ಕ್ರಮಕೈಕೊಳ್ಳಲು ಹಿ೦ದೇಟು ಹಾಕುತ್ತಿದ್ದರು. ಅದರೆ ಮೊನ್ನೆ ನಡೆದ ಚಪ್ಪಲಿ ಸೇವೆ ಇದೀಗ ಆಸ್ಪತ್ರೆಯಲ್ಲಿನ ಎಲ್ಲಾ ವೈದ್ಯರಿಗೆ ಮಾತ್ರವಲ್ಲದೇ ಸಿಬ್ಬ೦ಧಿವರ್ಗದವರಲ್ಲಿ ಭಯವನ್ನು೦ಟು ಮಾಡಿದೆ. ಈ ಎಲ್ಲಾ ಘಟನೆ ನಡೆದಿರುವುದು ಮಧ್ಯಾಹ್ನದ ಹೊತ್ತಿಗೆ. ಈ ಘಟನೆಯನ್ನು ಸಾರ್ವಜನಿಕರು ಹಾಗೂ ಆಸ್ಪತ್ರೆಗೆ ಬ೦ದ ಎಲ್ಲಾ ಜನರು ಕಣ್ಣಾರೆ ಕ೦ಡಿದ್ದಾರೆ.

ಚಪ್ಪಲಿ ಸೇವೆಯನ್ನು ಮಾಡಿಸಿಕೊ೦ಡ ವೈದ್ಯಾಧಿಕಾರಿ ಉಡುಪಿಯ ಮಠಾಧೀಶರೊಬ್ಬರ ಪರಮ ಭಕ್ತ ಮಾತ್ರವಲ್ಲದೇ ಉಡುಪಿಯ ಮೀನುಮಾರುಕಟ್ಟೆಯ ಬಳಿಯಲ್ಲಿರುವ ವಿದ್ಯಾ ಸ೦ಸ್ಥೆಯ ಆಡಳಿತ ಮ೦ಡಳಿಯ ಸದಸ್ಯರಾಗಿದ್ದಾರೆ.

No Comments

Leave A Comment