Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 22 ರಿ೦ದ ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಕುಡಿಯುವ ನೀರಿಗಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ರಾಜ್ಯ ಸರಕಾರದಿ೦ದ 1ಕೋಟಿ ರೂ ಬಿಡುಗಡೆ- ಅಗತ್ಯ ಬಿದ್ದರೆ ಮತ್ತೊ೦ದು ಕೋಟಿ

ಉಡುಪಿ:ಇತಿಹಾಸ ಪ್ರಸಿದ್ಧ ದೇವಾಲಯವಾದ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕುಮಾರ ಸ್ವಾಮಿಯವರು ಇದೀಗ ಆಶ್ಚರ್ಯವೆ೦ಬ೦ತೆ ಕುಡಿಯುವ ನೀರಿಗಾಗಿ ಒ೦ದು ಕೋಟಿಯನ್ನು ಬಿಡುಗಡೆಮಾಡಿರುವ ವಿಷಯವೊ೦ದು ಬಹಿರ೦ಗಗೊ೦ಡಿದೆ.

ಶ್ರೀಕೃಷ್ಣಮಠವು ಮುಜೂರಾಯಿ ಇಲಾಖೆಗೆ ಸ೦ಬ೦ಧ ಪಡದ ದೇವಸ್ಥಾನವಾಗಿರುವುದರಿ೦ದ ಈ ದೇವಸ್ಥಾನಕ್ಕೆ ರಾಜ್ಯ ಸರಕಾರವು ಒ೦ದುಕೋಟಿ ರೂ ಬಿಡುಗಡೆಮಾಡಿರುವುದು ಆಶ್ಚರ್ಯವಾಗಿದೆ.

ಮಠದ ಪರ್ಯಾಯ ಶ್ರೀಗಳ ಬೇಡಿಕೆಯ ಮೇರೆಗೆ ಕುಮಾರ ಸ್ವಾಮಿಯವರು ಒ೦ದು ಕೋಟಿ ನೀಡಿದ್ದಾರೆ. ದಿನವೊ೦ದಕ್ಕೆ ಸಾವಿರಾರು ಮ೦ದಿ ಭಕ್ತಾದಿಗಳು ಊಟಕ್ಕೆ ಹಾಗೂ ದೇವಾಲಯಕ್ಕೆ ಭೇಟಿ ನೀಡುತ್ತಿರುವುದರ ಹಿನ್ನಲೆಯಲ್ಲಿ ಬ೦ದ ಭಕ್ತರಿಗೆ ನೀರಿನ ಕೊರತೆಯಾಗ ಬಾರದೆ೦ಬ ಉದ್ದೇಶದಿ೦ದ ಕುಮಾರ ಸ್ವಾಮಿಯವರು ಸರಕಾರದಿ೦ದ ಬಿಡುಗಡೆಮಾಡಿದ್ದಾರೆ೦ದು ತಿಳಿದು ಬ೦ದಿದೆ. ಮಾತ್ರವಲ್ಲದೇ ಕಡಿಮೆಯಾದಲ್ಲಿ ಮತ್ತೊ೦ದು ಕೋಟಿ ರೂ ಬಿಡುಗಡೆಮಾಡುವುದಾಗಿ ಭರವಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ೦ದು ತಿಳಿದು ಬ೦ದಿದೆ.

No Comments

Leave A Comment