Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಬ್ರೇಕ್ ನಲ್ಲಿ ದೋಷ: 7 ಸಾವಿರ ಬುಲೆಟ್ ಹಿಂಪಡೆದ ರಾಯಲ್ ಎನ್ ಫೀಲ್ಡ್

ನವದೆಹಲಿ: ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್ ಎನ್ ಫೀಲ್ಡ್, ಬ್ರೇಕ್ ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸುವುದಕ್ಕಾಗಿ 7 ಸಾವಿರ ಬುಲೆಟ್ ಹಾಗೂ ಬುಲೆಟ್ ಎಲೆಕ್ಚ್ರಾ ಮಾದರಿಯ ಬೈಕ್ ಗಳನ್ನು ಹಿಂಪಡೆದಿದೆ.

ಮಾರ್ಚ್ 20, 2019 ರಿಂದ ಏಪ್ರಿಲ್ 30, 2019 ರ ನಡುವೆ ತಯಾರಿಸಲಾದ ಈ ಎರಡು ಮಾದರಿಯ ಬೈಕ್ ಗಳ ಬ್ರೇಕ್ ಕ್ಯಾಲಿಪರ್ ಬೋಲ್ಟ್ ಕುರಿತು ತಪಾಸಣೆ ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ.

ಬ್ರೇಕ್ ಕ್ಯಾಲಿಪರ್ ಬೋಲ್ಟ್ ಳಲ್ಲಿರುವ ಟಾರ್ಕ್ಯೂ ಅನ್ನು ಮಾರಾಟಗಾರರಿಂದ ಸರಬರಾಜು ಮಾಡಲಾಗಿದ್ದು, ಕೆಲವು ಬೈಕ್ ಗಳಲ್ಲಿ ಬಳಸಿದ ಟಾರ್ಕ್ಯೂ ಕಠಿಣವಾಗಿದ್ದು, ಅದು ರಾಯಲ್ ಎನ್ಫೀಲ್ಡ್ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರೇಕ್ ವ್ಯವಸ್ಥೆಯಲ್ಲಿ ಕ್ಯಾಲಿಪರ್ ಬೋಲ್ಟ್ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.

No Comments

Leave A Comment