Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯಲು ಕಾರಿಗೆ ಕೆಂಪು ಗೂಟ: 6 ಮಂದಿ ಅರೆಸ್ಟ್‌

ನೋಯ್ಡಾ, ಉತ್ತರ ಪ್ರದೇಶ: ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯುವ ಸಲುವಾಗಿ ತಮ್ಮ ಕಾರಿನ ಟಾಪ್‌ಗೆ ಕೆಂಪು ಗೂಟ ಹಾಕಿಸಿಕೊಂಡಿದ್ದ ಆರು ಮಂದಿಯನ್ನು ಗ್ರೇಟರ್‌ ನೋಯ್ಡಾ ಪೊಲೀಸರು ಇಂದು ಮಂಗಳವಾರ ಬಂಧಿಸಿದ್ದಾರೆ.

ಒಂದು ಕಾಲದಲ್ಲಿ ವಿಐಪಿಗಳ ಪ್ರತಿಷ್ಠೆಯ ಪ್ರತೀಕವಾಗಿದ್ದ ಕೆಂಪು ಗೂಟಗಳನ್ನು 2017ರ ಮೇ ತಿಂಗಳಲ್ಲಿ ಭಾರತಾದ್ಯಂತ ನಿಷೇಧಿಸಲಾಗಿತ್ತು.

ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯಲು ತಮ್ಮ ಕಾರಿನ ಟಾಪ್‌ ಗೆ ಕೆಂಪು ಗೂಟ ಹಾಕಿಸಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಆರು ಮಂದಿಯನ್ನು ಆ ಹೊತ್ತಿನಲ್ಲೇ ಬಂಧಿಸಲಾಯಿತು ಎಂದು ಬಾದಲಪುರ ಪೊಲೀಸ್‌ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಬಂಧಿತರನ್ನು ಹರ್ಷ, ಶುಭಂ, ಆಜಾದ್‌, ಇಂದ್ರರಾಜ್‌, ಯತೀಂದ್ರ ಮತ್ತು ಹರೇಂದ್ರ ಎಂದು ಗುರುತಿಸಲಾಗಿದೆ. ಇವರೆಲ್ಲ 18ರಿಂದ 21ರ ವಯೋ ಗುಂಪಿನವರಾಗಿದ್ದಾರೆ.

No Comments

Leave A Comment