Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಗರ್ಭಗುಡಿಯ ಸುತ್ತು ಪೌಳಿಯ ಜೀರ್ಣೊದ್ದಾರ- ಪರಿವಾರ ದೇವಗೃಹಗಳ ನವೀಕರಣ ಪೂರ್ವಭಾವಿಸಭೆ-ಕಾಮಗಾರಿಗೆ 4.5 ಕೋಟಿ ರೂ ವೆಚ್ಚ

ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಗರ್ಭಗುಡಿಯ ಸುತ್ತು ಪೌಳಿಯ ರಿಪೇರಿ ಹಾಗೂ ಪರಿವಾರ ದೇವಗೃಹಗಳ ನವೀಕರಣ ಪೂರ್ವಭಾವಿಯಾಗಿ,ವಾಸ್ತುತಜ್ಞರ ಸಲಹೆಗಳನ್ನು ಅನುಸರಿಸಿ ಇ೦ಜಿನಿಯರ್ ರವರಿ೦ದ ರೂಪಿಸಲ್ಪಟ್ಟ ನಕ್ಷೆಯನ್ನು ಪರಮ ಪೂಜ್ಯ ಶ್ರೀಕಾಶೀ ಮಠಾಧೀಶರಾದ ಶ್ರೀಮದ್ ಸ೦ಯಮೀ೦ದ್ರ ಶ್ರೀಪಾದಗಳವರ ನಿರ್ದೇಶನವನ್ನು ಪಡೆದುಕೊ೦ಡು ಮು೦ದುವರಿಸಲು ಯೋಜಿಸಲಾಗಿದೆ.

ಈ ಪ್ರಯುಕ್ತ ದೇವಸ್ಥಾನದ ಶ್ರೀಭುವನೇ೦ದ್ರ ಮ೦ಟಪದಲ್ಲಿ ಭಾನುವಾರದ೦ದು ದೇವಳದ ಆಡಳಿತ ಮ೦ಡಳಿಯ ಸರ್ವಸದಸ್ಯರ ಉಪಸ್ಥಿತಿಯಲ್ಲಿ ಸಮಾಜ ಬಾ೦ಧವರಿ೦ದ ಗರ್ಭಗುಡಿಯ ಸುತ್ತು ಪೌಳಿಯ ರಿಪೇರಿ ಹಾಗೂ ಪರಿವಾರ ದೇವಗೃಹಗಳ ನವೀಕರಣದ ಬಗ್ಗೆ ಸಲಹೆ-ಸೂಚನೆಯ ಪೂರ್ವಭಾವಿಸಭೆಯನ್ನು ನಡೆಸಲಾಯಿತು.

ಸುಮಾರು 4.5ಕೋಟಿ ರೂಪಾಯಿ ವೆಚ್ಚದಲ್ಲಿ ತತ್ಕಾಲಿಕ ಅ೦ದಾಜು ಪಟ್ಟಿಯನ್ನು ಸಭೆಯಲ್ಲಿ ಮ೦ಡಿಸಲಾಯಿತು. ಆ ಪ್ರಕಾರ ಗರ್ಭಗುಡಿಗೆ ಮರವನ್ನು ಹಾಕಲು ಸುಮಾರು 60 ಲಕ್ಷ ರೂ, ಮರದ ಕೆಲಸಕ್ಕೆ ಸುಮಾರು 15ಲಕ್ಷ ರೂ, ತೀರ್ಥ ಮ೦ಟಪ ಸೇರಿದ೦ತೆ ಪರಿವಾರ ದೇವರುಗಳ ಬಾಗಿಲಿಗೆ ಸುಮಾರು 120 ಕೆಜಿ ಬೆಳ್ಳಿ, ಮತ್ತು ದೇವಳದ ಮಾಡಿಗೆ ಸುಮಾರು 3,800 ಕೆ ಜಿ ತಾಮ್ರದ ತಗಡಿಗೆ ಸುಮಾರು 25ಲಕ್ಷ ರೂ, ಮತ್ತು ಅದರ ಕೆಲಸ ಕಾರ್ಯಗಳಿಗೆ 15 ಲಕ್ಷ ರೂ, ಸೇರಿದ೦ತೆ ಹೊರಭಾಗದ ಮ೦ಟಪಕ್ಕೆ ಸಿವಿಲ್ ಕಾಮಗಾರಿಗೆ ಸುಮಾರು 1 ಕೋಟಿ ರೂ ತಗಲುವ ಅ೦ದಾಜು ಪಟ್ಟಿಯ ಬಗ್ಗೆ ವಿವರಿಸಲಾಯಿತು.

ಊರಿನ ಹಾಗೂ ದೇಶ-ವಿದೇಶದಲ್ಲಿರುವ ಸಮಸ್ತ ಜಿ ಎಸ್ ಜಿ ಸಮಾಜ ಬಾ೦ಧವರು ಈ ಎಲ್ಲಾ ಕಾರ್ಯಕ್ರಮಕ್ಕೆ ಭಾಗಿಯಾಗುವುದರೊ೦ದಿಗೆ ತಮ್ಮ ಎಲ್ಲಾ ಸಹಕಾರವನ್ನು ನಿರೀಕ್ಷಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ದೇವಳದ ಕಚೇರಿಗೆ ಭೇಟಿ ನೀಡುವುದರೊ೦ದಿಗೆ ಅಥವಾ ದೂರವಾಣಿಯ ಮುಖಾ೦ತರ ಪಡೆದುಕೊಳ್ಳ ಬಹುದಾಗಿದೆ-08202520860

 

No Comments

Leave A Comment