Log In
BREAKING NEWS >
ದೇಶದಲ್ಲಿ ಮುಂದುವರೆದ ಕೊರೋನಾ ಆರ್ಭಟ: ತ.ನಾಡಲ್ಲಿ ಮತ್ತಿಬ್ಬರು ಬಲಿ, ಸಾವಿನ ಸಂಖ್ಯೆ 83ಕ್ಕೆ ಏರಿಕೆ.....ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಮೇ 15ರಂದು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಐಶಾರಾಮಿ ಎಂಜಿ ಹೆಕ್ಟರ್ SUV ಕಾರು!

ನವದೆಹಲಿ: ಪ್ರತಿಷ್ಠಿತ ಎಂಜಿ ಮೋಟಾರ್ ಸಂಸ್ಥೆಯ ನೂತನ ಎಂಜಿ ಹೆಕ್ಟರ್ ಎಸ್ ಯುವಿ ಕಾರುಗಳು ಮೇ 15ರಂದು ಭಾರತದಲ್ಲಿ ಅನಾವರಣಗೊಳಿಸಲಿದ್ದು, ಜೂನ್ ತಿಂಗಳಿನಿಂದ ರಸ್ತೆಗಿಳಿಯಲು ಸಿದ್ಧವಾಗಿದೆ. ಎಸ್ ಯುವಿ ಕಾರಿಗೆ ಸಂಬಂಧಿಸಿದ ಚಿತ್ರಗಳನ್ನು ಎಂಜಿ ಕಂಪನಿ ಈಗಾಗಲೇ ಹಂಚಿಕೊಂಡಿದ್ದು, ಹೆಕ್ಟರ್ ಎಸ್ ಯುವಿ ಬಂಪರ್ ನಲ್ಲಿ ಎಲ್ ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಅಲ್ಲದೇ ಡೇ ಟೈಮ್ ರನ್ನಿಂಗ್ ಲೈಟ್ (ಡಿಆರ್ ಎಲ್ ಎಸ್) ಅನ್ನು ಹೊಂದಿದೆ.

ಎಂಜಿ ಹೆಕ್ಟರ್ ಎಸ್ ಯುವಿ ಕಾರಿನ ಆರಂಭಿಕ ಬೆಲೆ 15ರಿಂದ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆ ಕಾರು ತಯಾರಿಕೆಯಲ್ಲಿ ದೊಡ್ಡ ಹೆಸರನ್ನು ಗಳಿಸಿದೆ.

ಬಿಎಸ್ 6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ನಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಆವೃತ್ತಿಯು 160 ಬಿಎಚ್‌ಪಿ, 200 ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170 ಬಿಎಚ್‌ಪಿ, 340 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಇದರಲ್ಲಿ ಹುಂಡೈ ವೆನ್ಯೂ ಮಾದರಿಯ ಫೀಚರ್ಸ್ ಗಳನ್ನು ಹೊಂದಿದೆ.

ಹೆಕ್ಟರ್ ಒಳಭಾಗದಲ್ಲಿ 10.4 ಇಂಚಿನ ಟಚ್ ಸ್ಕ್ರೀನ್, ರನ್ನಿಂಗ್ ಐಎಸ್ ಎಂಎಆರ್ ಟಿ ಸಿಸ್ಟಮ್. ಇದು ಕಾರಿನ ಆ್ಯಂಡ್ರಾಯ್ಡ್ ಆಧಾರಿತ ಓಎಸ್ನ 4ಜಿ ಕನೆಕ್ಟಿವಿಟಿಯೊಂದಿಗೆ ಕಾರ್ಯನಿರ್ವಹಿಸಲಿದೆ.

ಹೆಕ್ಟರ್ ಅನ್ನು ಭಾರತೀಯ ಕಾರು ಪ್ರಿಯರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಂಜಿ ನಿರ್ಧಾರ ತೆಗೆದುಕೊಳ್ಳಲಿದೆ. ಇದರಲ್ಲಿ ಬೆಲೆಯ ಅಂಶ ಮುಖ್ಯವಾದದ್ದು. ಹೆಕ್ಟರ್ ಅಂದಾಜು ಬೆಲೆ 15ರಿಂದ 20 ಲಕ್ಷ ರೂ., ಭಾರತದ ಮಾರುಕಟ್ಟೆಗೆ ಹೆಕ್ಟರ್ ಪ್ರವೇಶಿಸಿದರೆ ಇದು ಜೀಪ್ ಕಂಪಾಸ್, ಹುಂಡಾಯ್ ಟ್ಯುಕ್ಸಾನ್ ಹಾಗೂ ಟಾಟಾ ಹ್ಯಾರಿಯರ್ ಗೆ ಪ್ರಬಲ ಸ್ಪರ್ಧೆಯೊಡ್ಡಲಿದೆ ಎಂದು ಕಂಪನಿ ಹೇಳಿದೆ.

No Comments

Leave A Comment