Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಫನಿ ಚಂಡಮಾರುತ ಎಫೆಕ್ಟ್: ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8ಮಂದಿ ಬಲಿ

ಲಕ್ನೋ: ಫನಿ ಚಂಡಮಾರುತದ ಎಫೆಕ್ಟ್ ಉತ್ತರ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ, ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8 ಮಂದಿ ಬಲಿಯಾಗಿದ್ದಾರೆ.

ಚಾಂದೌಳಿ ಮತ್ತು ಸೋನ್ ಭಾದ್ರಾದಲ್ಲಿ ಸಿಡಿಲಿಗೆ 8 ಮಂದಿ ಸಾವನ್ನಪ್ಪಿದ್ದಾರೆ, ಈಗಾಗಲೇ ಹವಾಮಾನ ಇಲಾಖೆ, ಮುಂದಿನ 2 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಸಿಡಿಲು ಬಡಿದಾಗ ನಾಲ್ಕು ಮಂದಿ ಸಾವನ್ನಪ್ಪಿದರು, ಇನ್ನೂ ಐದು ಮಂದಿ ಗಂಬೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಎರಡನೇ ಘಟನೆಯಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ, ಇವರ ಜೊತೆಗೆ ಓರ್ವ ವೃದ್ಧ ಹಾಗೂ ಇಬ್ಬರು ಸಹೋದರರು ಕೂಡ ಸಿಡಿಲಿಗೆ ಬಲಿಯಾಗಿದ್ದಾರೆ.

No Comments

Leave A Comment