Log In
BREAKING NEWS >
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಸರ್ವಜ್ಞ ಪೀಠಾರೋಹಣಕ್ಕೆ ಕ್ಷಣಗಣನೆ.... ಉಡುಪಿಯಲ್ಲಿ ಭಾರೀ ಪೊಲೀಸ್ ಬ೦ದೋಬಸ್ತು......ಉಡುಪಿ:ಪರ್ಯಾಯ ಮಹೋತ್ಸವಕ್ಕೆ ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಸಚಿವ ಡಿಕೆಶಿ ಕಾಲಿಗೆ ಬಿದ್ದ ಸಂಸದ ಪ್ರತಾಪ್‌ ಸಿಂಹ !

ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರಗಳೂ ಅಲ್ಲ ಎನ್ನುವ ಮಾತಿನಂತೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸಚಿವಡಿ.ಕೆ.ಶಿವಕುಮಾರ್‌ ಅವರ ಕಾಲಿಗೆ ಬಿದ್ದು ಹೊಸ ಚರ್ಚೆ ಆರಂಭವಾಗಲು ಕಾರಣವಾಗಿದ್ದಾರೆ.

ಇಂದು ಬುಧವಾರ ಮಾಜಿ ಮುಖ್ಯಮಂತ್ರಿ , ಬಿಜೆಪಿ ನಾಯಕರ ಎಸ್‌.ಎಂ.ಕೃಷ್ಣ ಅವರ 88 ನೇ ಜನ್ಮದಿನಾಚರಣೆಯ ನಿಮಿತ್ತ ಅವರ ನಿವಾಸಕ್ಕೆ ಉಭಯ ನಾಯಕರು ಶುಭ ಕೋರಲು ಆಗಮಿಸಿದ್ದರು.

ಶಿವಕುಮಾರ್‌ ಅವರನ್ನು ಮನೆ ಬಾಗಿಲಿನಲ್ಲಿ ಕಂಡೋಡನೆಯೇ ನಗುನಗುತ್ತಾ ತೆರಳಿದ ಪ್ರತಾಪ್‌ ಸಿಂಹ ಕಾಲಿಗೆ ಬಿದ್ದಿದ್ದಾರೆ. ಶಿವಕುಮಾರ್‌ ಅವರೂ ನಗುನಗುತ್ತಾ ಪ್ರತಾಪ್‌ ಸಿಂಹ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ.

ಹೊಸ ಚರ್ಚೆ ಶರು
ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಾಪ್‌ ಸಿಂಹ ಅವರು ಡಿ.ಕೆ.ಶಿವಕುಮಾರ್‌ ಅವರ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.

ಕಾಂಗ್ರೆಸ್‌ ಮತಗಳು ನಮಗೆ ಬಿದ್ದಿವೆ!
ಜಿ.ಟಿ.ದೇವೇಗೌಡ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಪ್ರತಾಪ್‌ ಸಿಂಹ ಜೆಡಿಎಸ್‌ ಮಾತ್ರವಲ್ಲ ಕಾಂಗ್ರೆಸ್‌ ನವರ ಮತಗಳೂ ನನಗೆ ಬಿದ್ದಿವೆ. ಲೋಕಸಭಾ ಚುನಾವಣೆ ಮತದಾನ ಮಾಡುವ ವೇಳೆ ಮತದಾರರ ಮನಸ್ಥಿತಿ ಬೇರೆಯದ್ದೆ ಇರುತ್ತದೆ ಎಂದರು.

No Comments

Leave A Comment