Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ನಕ್ಸಲರ ಅಟ್ಟಹಾಸ : ವಾಹನ ಸ್ಫೋಟ; 15 ಕಮಾಂಡೋಗಳು ಹುತಾತ್ಮ

ಗಡ್‌ಚಿರೋಲಿ: ಮಹಾರಾಷ್ಟ್ರದಲ್ಲಿ ನಕ್ಸಲರು ಬುಧವಾರ ಅಟ್ಟಹಾಸ ಮೆರೆದಿದ್ದು ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ದಾಳಿಯ ಹಾಗೆ ಹೊಂಚು ದಾಳಿ ನಡೆಸಿದ್ದು 15 ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ನಕ್ಸಲರು ಮೊದಲು ರಸ್ತೆಕಾಮಗಾರಿ ಮಾಡುತ್ತಿದ್ದ 27 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಕಾರ್ಯಾಚರಣೆಗಿಳಿದ ಕಮಾಂಡೋಗಳನ್ನು ಗುರಿಯಾಗಿರಿಸಿಕೊಂಡು ರಸ್ತೆಯಲ್ಲಿ ಐಇಡಿ ಸ್ಫೋಟ ನಡೆಸಿದ್ದಾರೆ.

ಸಿ 60 ಭದ್ರತಾ ಪಡೆಯ 15 ಮಂದಿ ಕಮಾಂಡೋಗಳು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.

ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಂಡು ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ.

No Comments

Leave A Comment