Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

SSLC ಫ‌ಲಿತಾಂಶ: ಹಾಸನ ಫ‌ಸ್ಟ್‌; 5 ನೇ ಸ್ಥಾನಕ್ಕೆ ಕುಸಿದ ಉಡುಪಿ

ಬೆಂಗಳೂರು: ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಮಂಗಳವಾರ ಬೆಳಗ್ಗೆ ಪ್ರಕಟವಾಗಿದ್ದು ಶೇಕಡಾ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಆನೇಕಲ್‌ನ ಸೆಂಟ್‌ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ಕೊಲಬಾ ವಿಠೊಬಾ ಶಾನ್‍ಬಾಗ್ ಕಲ್ಬಕ್ಕರ್ ಹೈ ಸ್ಕೂಲ್‍ನ ನಾಗಾಂಜಲಿ ನಾಯಕ್‌ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಾಸನ ಮೊದಲ ಸ್ಥಾನ (89.33%), ರಾಮನಗರ ದ್ವಿತೀಯ (88.49%), ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ (88.49%), ಉತ್ತರಕನ್ನಡ ನಾಲ್ಕನೇ ಸ್ಥಾನ, ಉಡುಪಿ 5 ನೇ ಸ್ಥಾನ, ಚಿಕ್ಕೋಡಿ 6 ನೇ ಸ್ಥಾನ ಪಡೆದಿದೆ.

ಪರೀಕ್ಷೆ ಬರೆದ ಶೇಕಡಾ 79 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.68 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದ 8.41 ಲಕ್ಷ ವಿದ್ಯಾರ್ಥಿಗಳ ಪೈಕಿ 6,08,336 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮಾ.21ರಿಂದ ಏ.4ರವರೆಗೆ ನಡೆದ ಎಸ್ಸೆಸ್ಸೆಲ್ಸಿ
. ಎಲ್ಲ ಪರೀಕ್ಷೆಯಲ್ಲೂ ಸರಾಸರಿ
25 ಸಾವಿರ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ರಾಜ್ಯದ 5,202 ಸರ್ಕಾರಿ ಪ್ರೌಢಶಾಲೆ, 3,244
ಅನುದಾನಿತ, 6004 ಅನುದಾನ ರಹಿತ ಸೇರಿದಂತೆ
14,450 ಪ್ರೌಢಶಾಲೆಗಳ 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

ಏ.10ರಿಂದ ರಾಜ್ಯದ 230 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿದೆ. 77,754 ಮೌಲ್ಯಮಾಪಕರು ಆನ್‌ಲೈನ್‌ ಪೋರ್ಟಿಂಗ್‌ ಮೂಲಕ ಅಂಕಗಳನ್ನು ಮೌಲ್ಯಮಾಪನದ ದಿನವೇ ನಮೂದಿಸಿದ್ದರು.

ಫ‌ಲಿತಾಂಶವನ್ನು http://kseeb.kar.nic.in/ ನಲ್ಲಿ ಪಡೆಯಬಹುದಾಗಿದೆ.

No Comments

Leave A Comment