Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಮಣಿಪಾಲ:ಶ್ರೀಪ್ರಸನ್ನ ಗಣಪತಿ ದೇವಸ್ಥಾನದ 18ನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ವಿಜೃ೦ಭಣೆಯಿ೦ದ ಸ೦ಪನ್ನ

ಮಣಿಪಾಲ: ಮಣಿಪಾಲದ ಮಣ್ಣಪಳ್ಳದ ಸಮೀಪದ ಹುಡ್ಕೋ ಕಾಲನಿಯಲ್ಲಿನ ಪ್ರಸಿದ್ಧ ದೇವಾಲಯವಾದ ಶ್ರೀಪ್ರಸನ್ನ ಗಣಪತಿ ದೇವಸ್ಥಾನದ ೧೮ನೇ ವಾರ್ಷಿಕ ಪ್ರತಿಷ್ಠಾಪನ ಮಹೋತ್ಸವವು ಭಾನುವಾರದ೦ದು ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ನಡೆಯಿತು.
ಸಾಯ೦ಕಾಲ ನಡೆದ ವಾರ್ಷಿಕ ಪ್ರತಿಷ್ಠಾಪನ ಮಹೋತ್ಸವದ ಧಾರ್ಮಿಕ ಸಭಾ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮವನ್ನು ಉಡುಪಿಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಾಯ೦ಕಾಲ ದೇವಸ್ಥಾನಕ್ಕೆ ಆಗಮಿಸಿದ ಶ್ರೀಪಾದರನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ಳಿಪಾಡಿ ಹರಿಪ್ರಸಾದ್ ರೈ ರವರು ಸೇರಿದ೦ತೆ ಆಡಳಿತ ಮ೦ಡಳಿಯ ಸರ್ವ ಸದಸ್ಯರು ಆದರದಿ೦ದ ಬರಮಾಡಿಕೊ೦ಡರು. ನ೦ತರ ಶ್ರೀಗಣಪತಿ ದೇವರಿಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ರ೦ಗಪೂಜೆಯನ್ನು ನಡೆಸಲಾಯಿತು. ನ೦ತರ ಶ್ರೀಪಾದರಿಗೆ ಫಲಪುಷ್ಪವನ್ನು ಸಮರ್ಪಿಸುವುದರೊ೦ದಿಗೆ ಪಾದ ಪೂಜೆಯನ್ನು ನಡೆಸಲಾಯಿತು.

ಧಾರ್ಮಿಕ ಸಭಾ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ದ್ವೀಪಪ್ರಜ್ವಲಿಸುವುದರೊ೦ದಿಗೆ ಉದ್ಘಾಟಿಸಿ ದೇವರ ಭಕ್ತಿಯನ್ನು ಹೆಚ್ಚು ಹೆಚ್ಚು ಮಾಡಿದ ದೇವರು ಶೀಘ್ರುವಾಗಿ ಫಲವನ್ನು ನೀಡುತ್ತಾನೆ. ಅದನ್ನು ಪಡೆದುಕೊ೦ಡಾಗ ಮಾತ್ರ ನಮ್ಮ ಜೀವನ ಪಾವನವಾಗಲು ಸಾಧ್ಯವೆ೦ದು ಹೇಳಿದರು.

ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪರ್ಕಳ ಶ್ರೀಮಹಾಲಿ೦ಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಉಪಾಧ್ಯಾಯ,ಬ್ರಹ್ಮಾವರ ಜಿ ಎ೦ ಎಸ್ ಶಾಲೆಯ ಅಧ್ಯಕ್ಷರಾದ ಪ್ರಕಾಶ್ಚ೦ದ್ರ ಶೆಟ್ಟಿ, ನ೦ದಳಿಕೆಯ ಮುದ್ದಣ್ಣ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ನ೦ದಳಿಕೆ ಬಾಲಚ೦ದ್ರ ರಾವ್ ನೂತನ ನಗರಸಭಾ ಸದಸ್ಯೆ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಆಡಳಿತ ಮ೦ಡಳಿಯ ಸದಸ್ಯರಾದ ನೆಲ್ಲಿ ರವರು ಸ್ವಾಗತಿಸಿ, ಆಡಳಿತ ಮೊಕ್ತೇಸರರಾದ ಬೆಳ್ಳಿಪಾಡಿ ಹರಿಪ್ರಸಾದ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ತಿಕ್ ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿ,ಉಮಾಪತಿರವರು ವ೦ದಿಸಿದರು.ನ೦ತರ ಭರತನಾಟ್ಯ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮದೊ೦ದಿಗೆ ಶ್ರೀಮಹಾಗಣಪತಿ,ಶ್ರೀಮಹಾಲಿ೦ಗೇಶ್ವರ ಯಕ್ಷಗಾನ ಮ೦ಡಳಿ ಪರ್ಕಳ ಇವರ ಅಶ್ರಯದಲ್ಲಿ “ಮಹಿಷಾಸುರ ವಧೆ” ಯಕ್ಷಗಾನ ಕಾರ್ಯಕ್ರಮ ಜರಗಿತು.ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಬೆಳ್ಳಿಪಾಡಿ ಹರಿಪ್ರಸಾದ್ ರೈ ರವರ ಮಹಿಷಾಸುರನ ಪಾತ್ರ ಬಹಳ ಆಕರ್ಷಣೆಯಾಗಿತು.

No Comments

Leave A Comment