Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಖೇಲ್ ರತ್ನ ಪ್ರಶಸ್ತಿಗೆ ವಿನೀಶ್ ಪೋಗಾಟ್, ಬಜರಂಗ್ ಪುನಿಯಾ ಹೆಸರು ಶಿಫಾರಸ್ಸು!

ನವದೆಹಲಿ: ಭಾರತದ ಕ್ರೀಡಾ ಲೋಕದ ಪ್ರತಿಷ್ಠಿತ ಪ್ರಶಸ್ತಿ ರಾಜೀವ್ ಖೇಲ್ ರತ್ನ ಪ್ರಶಸ್ತಿಗೆ ಖ್ಯಾತ ಕುಸ್ತಿ ಪಟುಗಳಾದ ವಿನೀಶ್ ಪೋಗಾಟ್, ಬಜರಂಗ್ ಪುನಿಯಾ ಅವರ ಹೆಸರುಗಳನ್ನು ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಶಿಫಾರಸ್ಸು ಮಾಡಿದೆ.

ಅಂತೆಯೇ ರೆಸ್ಲರ್ ರಾಹುಲ್ ಅವೇರ್, ಹರ್ಪೀತ್ ಸಿಂಗ್, ದಿವ್ಯಾ ಕಕ್ರನ್ ಮತ್ತು ಪೂಜಾ ದಂಡಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಉಳಿದಂತೆ ವೀರೇಂದ್ರ ಕುಮಾರ್, ಸುಜೀತ್ ಮಾನ್, ನರೇಂದ್ರ ಕುಮಾರ್ ಮತ್ತು ವಿಕ್ರಮ್ ಕುಮಾರ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

 

ಭೀಮ್ ಸಿಂಗ್ ಮತ್ತು ಜೈ ಪ್ರಕಾಶ್ ಅವರ ಹೆಸರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

No Comments

Leave A Comment