Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಬೆಂಗಳೂರು vs ಡೆಲ್ಲಿ: ಟಾಸ್ ಗೆದ್ದ DC ಬ್ಯಾಟಿಂಗ್

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ನಡೆಯುತ್ತಿರುವ ಹೈವೋಲ್ಟೇಜ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸುತ್ತಿದೆ.

ಡೆಲ್ಲಿ ಬ್ಯಾಟಿಂಗ್…

Embedded video

ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಆರ್‌ಸಿಬಿ ತಂಡವನ್ನು ಹೆನ್ರಿಚ್ ಕ್ಲಾಸೆನ್, ಶಿವಂ ದುಬೆ ಹಾಗೂ ಗುರ್‌ಕೀರಾತ್ ಮನ್ ಸೇರಿಕೊಂಡಿದ್ದಾರೆ. ಇದರೊಂದಿಗೆ ಟಿಮ್ ಸೌಥಿ ಹಾಗೂ ಅಕ್ಷದೀಪ್ ನಾಥ್ ಅವಕಾಶ ವಂಚಿತರಾಗಿದ್ದಾರೆ. ಅತ್ತ ಡೆಲ್ಲಿ ತಂಡದಲ್ಲಿ ಕ್ರಿಸ್ ಮೊರಿಸ್ ಸ್ಥಾನಕ್ಕೆ ಸಂದೀಪ್ ಸೇರ್ಪಡೆಯಾಗಿದ್ದಾರೆ.

ಆಡುವ ಬಳಗ ಇಂತಿದೆ:

Delhi Capitals (Playing XI): Prithvi Shaw, Shikhar Dhawan, Shreyas Iyer(c), Rishabh Pant(w), Sherfane Rutherford, Colin Ingram, Axar Patel, Kagiso Rabada, Sandeep Lamichhane, Amit Mishra, Ishant Sharma

Royal Challengers Bangalore (Playing XI): Parthiv Patel(w), Virat Kohli(c), AB de Villiers, Marcus Stoinis, Heinrich Klaasen, Shivam Dube, Gurkeerat Singh Mann, Washington Sundar, Navdeep Saini, Umesh Yadav, Yuzvendra Chahal

ಆಡಿರುವ 11 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಒಟ್ಟು ಎಂಟು ಅಂಕಗಳನ್ನು ಮಾತ್ರ ಸಂಪಾದಿಸಿರುವ ಬೆಂಗಳೂರು ತಂಡಕ್ಕೆ ಮುಂದಿನೆಲ್ಲ ಎಲ್ಲ ಮೂರು ಪಂದ್ಯಗಳು ನಿರ್ಣಾಯಕವೆನಿಸಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದರೊಂದಿಗೆ ಪ್ಲೇ-ಆಫ್ ಪ್ರವೇಶಿಸಲು ಇತರೆ ತಂಡಗಳ ಫಲಿತಾಂಶಗಳು ಆರ್‌ಸಿಬಿಗೆ ಪೂರಕವಾಗಿರಬೇಕು.

ಹ್ಯಾಟ್ರಿಕ್ ಸೇರಿದಂತೆ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳನ್ನು ದಾಖಲಿಸಿರುವುದೇ ಆರ್‌ಸಿಬಿಗೆ ಪಾಲಿಗೆ ಆಶಾದಾಯಕವೆನಿಸಿದೆ. ಇನ್ನೊಂದೆಡೆ ಮೂರನೇ ಸ್ಥಾನದಲ್ಲಿರುವ ಡೆಲ್ಲಿ 11 ಪಂದ್ಯಗಳಲ್ಲಿ ಒಟ್ಟು 14 ಅಂಕಗಳನ್ನು ಕಲೆ ಹಾಕಿದೆ. ಅಲ್ಲದೆ ಆರ್‌ಸಿಬಿ ವಿರುದ್ಧದ ಪಂದ್ಯ ಗೆದ್ದು, ಪ್ಲೇ-ಆಫ್ ಪ್ರವೇಶವನ್ನು ಗಟ್ಟಿ ಮಾಡುವ ಇರಾದೆಯಲ್ಲಿದೆ.

No Comments

Leave A Comment