Log In
BREAKING NEWS >
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಸರ್ವಜ್ಞ ಪೀಠಾರೋಹಣಕ್ಕೆ ಕ್ಷಣಗಣನೆ.... ಉಡುಪಿಯಲ್ಲಿ ಭಾರೀ ಪೊಲೀಸ್ ಬ೦ದೋಬಸ್ತು......ಉಡುಪಿ:ಪರ್ಯಾಯ ಮಹೋತ್ಸವಕ್ಕೆ ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಐಎಸ್‌ಎಸ್‌ಎಫ್‌ ವಿಶ್ವಕಪ್‌: ಭಾರತದ ದಿವ್ಯಾಂಶ್‌ ಸಿಂಗ್‌ಗೆ ಬೆಳ್ಳಿ ಪದಕ

ಬೀಜಿಂಗ್‌: ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌(ಪಿಸ್ತೂಲ್‌/ರೈಫಲ್‌)ನ ಪುರುಷರ 10 ಮೀ ಏರ್‌ ರೈಫಲ್‌ನಲ್ಲಿ ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಅವರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಚಿನ್ನದ ಪದಕ ವಿಜೇತ ಚೀನಾದ ಹುಯಿ ಝಿನ್ಚೆಂಗ್‌ ಅವರಿಗಿಂತ ಭಾರತದ ಶೂಟರ್‌ ಕೇವಲ 0.4 ಅಂತರದಲ್ಲಿ ಹಿನ್ನಡೆಯಲಿದ್ದರು. ಚೀನಾದ ಶೂಟರ್‌ ಫೈನಲ್‌ ಸುತ್ತಿನಲ್ಲಿ ಒಟ್ಟು 249.4 ಅಂಕಗಳನ್ನು ಗಳಿಸಿದರು. ರಷ್ಯಾದ ಗ್ರಿಗೋರಿ ಶಾಮಕೋವ್‌ 227.4 ಅಂಕಗಳನ್ನು ಪಡೆದು ಕಂಚಿನ ಪದಕಕ್ಕೆ ತೃಪ್ತರಾದರು. 

 

 

ಭಾರತದ ದಿವ್ಯಾಂಶ್‌ ಗುರುವಾರ ಮಿಶ್ರ ಶೂಟಿಂಗ್‌ ತಂಡದಲ್ಲಿ ಚಿನ್ನದ ಪದಕ ಜಯಿಸಿದ್ದರು. ಭಾರತದ ಮಹಿಳಾ 10 ಮೀ. ರೈಫಲ್‌ ವಿಭಾಗದಲ್ಲಿ ಅಪೂರ್ವಿ ಚಂದೇಲಾ ಹಾಗೂ ಅಂಜುಮ್‌ ಮೌದ್ಗಿಲ್‌ ಹಾಗೂ ಪುರುಷರ ವಿಭಾಗದಲ್ಲಿ ಸೌರಭ್‌ ಚೌಧರಿ ಹಾಗೂ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಅವರು ಸೇರಿದಂತೆ ಒಟ್ಟು ನಾಲ್ವರು 10ಮೀ ಏರ್‌ ರೈಫಲ್‌ ವಿಭಾಗದಲ್ಲಿ ಮುಂಬರುವ ಒಲಿಂಪಿಕ್‌ಗೆ ಅರ್ಹತೆ ಪಡೆದಿದ್ದಾರೆ.

No Comments

Leave A Comment