Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತ, ಮೇ 24ರವರೆಗೂ ಪೊಲೀಸ್ ಕಸ್ಟಡಿ ವಿಸ್ತರಣೆ

 ಲಂಡನ್ :  ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ನಿರಾಕರಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಪೊಲೀಸ್ ಕಸ್ಟಡಿ ಅವಧಿಯನ್ನು ಮೇ 24ರವರೆಗೂ ನ್ಯಾಯಾಲಯ ವಿಸ್ತರಿಸಿದೆ.

ಗುರುವಾರ ಜಾರಿ ನಿರ್ದೇಶನಾಲಯ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿರುವ 13 ಲಕ್ಸುರಿ ಕಾರುಗಳನ್ನು ಹರಾಜು ಹಾಕಿದೆ.

1 ಕೋಟಿ 33 ಲಕ್ಷ ರೂ ಮೌಲ್ಯದ ರೊಲ್ಸ್  ರಾಯ್ಸ್,  54 ಲಕ್ಷದ 60 ಸಾವಿರ ಮೌಲ್ಯದ ಪೋರ್ಷೆ, 14 ಲಕ್ಷ ರೂ. ಮೌಲ್ಯದ ಮಾರ್ಸಿಡೆಸ್ ಬೆಂಚ್, 37 ಲಕ್ಷದ 80 ಸಾವಿರ ರೂ. ಮೌಲ್ಯದ ಬಿಳಿ ಬಣ್ಣದ ಮಾರ್ಸಿಡೆಸ್ ಬೆಂಚ್, ಹಾಗೂ 9 ಲಕ್ಷದ 80 ಸಾವಿರ ರೂ. ಬೆಲೆಯ ಬಿಎಂಡಬ್ಲ್ಯೂ ಕಾರನ್ನು  ಹರಾಜು ಮಾಡಲಾಗಿದೆ.

No Comments

Leave A Comment