Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕೊಳಲಗಿರಿ: ಕ್ಯಾಶ್ಯೂ ಫ್ಯಾಕ್ಟರಿ ಕಾರ್ಮಿಕರ ಧರಣಿ

ಬ್ರಹ್ಮಾವರ: ಕೊಳಲಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿ¤ರುವ ಕ್ಯಾಶ್ಯೂ ಕಂಪೆನಿಯು ಕಾರ್ಮಿಕರನ್ನು ಏಕಾ ಏಕಿ ಬೀದಿ ಪಾಲು ಮಾಡುವ ಸಿದ್ಧತೆಯಲ್ಲಿದ್ದಾರೆ ಎಂದು ಎಂದು ಆರೋಪಿಸಿ ಕಾರ್ಮಿಕರು ಧರಣಿ ನಡೆಸಿದರು.

ಸುಮಾರು 15 ವರ್ಷಗಳಿಂದ 3 ಪಾಳಿಯಲ್ಲಿ 500 ಮಂದಿ ಕಾರ್ಮಿಕರು ದುಡಿಯುತ್ತಿದ್ದು, ಬದುಕು ಕಟ್ಟಿಕೊಂಡಿದ್ದರು.

ಇತ್ತೀಚಿನ 2 ವರ್ಷದಿಂದ ಇಲ್ಲಿ ಕೆಲಸವನ್ನು ಕಡಿತಮಾಡುತ್ತಾ ಬಂದಿದ್ದು ಕಾರ್ಮಿಕರಿಗೆ ನಾನಾ ಕಾರಣ ಹೇಳಿ ಇಲ್ಲಿನ ಯಂತ್ರಗಳನ್ನು ಬೇರೆ ಕಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ.

ಬುಧವಾರ ಸಂಜೆ ಕೆಲಸ ಇಲ್ಲ ಎನ್ನುವ ಕಾರಣ ಹೇಳಿದ್ದರಿಂದ ಗುರುವಾರ ಬೆಳಗ್ಗೆ ಕಾರ್ಮಿಕರು ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು.

ಘಟನೆಯ ಸ್ಥಳಕ್ಕೆ ಬ್ರಹ್ಮಾವರ ಠಾಣೆಯ ಎಎಸ್‌ಐ ಗೋಪಾಲ್‌ ಪೂಜಾರಿ ಆಗಮಿಸಿ ಕಾರ್ಮಿಕರೊಂದಿಗೆ ಮತ್ತು ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.

ಸಂಸ್ಥೆಯ ಓರ್ವ ವ್ಯಕ್ತಿಯಿಂದ ಇಂತಹ ಅವಾಂತರವಾಗಿದೆ. ಮೊದಲು ಸೇವೆ ಸಲ್ಲಿಸುತ್ತಿವವರು ಪುನಃ ಬಂದಲ್ಲಿ ಸಮಸ್ಯೆ ಇಲ್ಲದಾಗುತ್ತದೆ ಎಂದು ಕಾರ್ಮಿಕರು ಪೊಲೀಸ್‌ ಅಧಿಕಾರಿಗಳ ಮುಂದೆ ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಆರತಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಕಾರ್ಮಿಕ ಸಂಘಟನೆಯ ಶಶಿಧರ ಗೊಲ್ಲ , ಗ್ರಾ.ಪಂ. ಸದಸ್ಯರಾದ ಪ್ರವೀಣ್‌, ಮಹೇಶ್‌ ಕೋಟ್ಯಾನ್‌, ಪದ್ಮನಾಭ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment