Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಜೆಕಾರು: ಮುನಿಯಾಲು ಪರಿಸರದಲ್ಲಿ ಭಾರೀ ಗಾಳಿ ಮಳೆ ಅಪಾರ ನಷ್ಟ

ಅಜೆಕಾರು: ಮುನಿಯಾಲು ಪರಿಸರದಲ್ಲಿ ಎ.23ರ ಸಂಜೆ ಸುರಿದ ಭಾರಿ ಮಳೆ, ಬಿರುಗಾಳಿ, ಸಿಡಿಲಿಗೆ ಪರಿಸರದ ಮನೆಗಳಿಗೆ ಅಪಾರ ನಷ್ಟ ಉಂಟಾಗಿದೆ.
ಭೀಕರ ಬಿರುಗಾಳಿಗೆ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಗೆ ಮರಗಳು ಉರುಳಿಬಿದ್ದು ಸುಮಾರು 2 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಮುನಿಯಾಲು ಕೆಳಪೇಟೆಯಿಂದ ಮಾತಿಬೆಟ್ಟುವರೆಗೆ ಬೃಹತ್‌ ಮರಗಳು ಮನೆಗಳ ಮೇಲೆ ಉರುಳಿ ಬಿದ್ದಿದೆ.

ಮುನಿಯಾಲುವಿನ ಬಾಲಕೃಷ್ಣ ಗೌಡ, ನಾಗೇಶ್‌ ಪೈ ರವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹಾನಿಗೀಡಾಗಿದೆ. ಅರಣ್ಯ ಇಲಾಖೆಯ ವಸತಿಗೃಹ ಹಾಗೂ ರಿûಾ ತಂಗುದಾಣದ ಮೇಲ್ಛಾವಣಿ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ.

ಮುನಿಯಾಲು ಪ್ರಾಥಮಿಕ ಶಾಲೆ ಸೇರಿದಂತೆ ಪರಿಸರದ 150 ಕ್ಕೂ ಅಧಿಕ ಮನೆಗಳ ಹೆಂಚು ಮತ್ತು ತಗಡು ಸೀಟುಗಳು ಗಾಳಿ ಹಾರಿ ಹೋಗಿವೆ.

ಮಾತಿಬೆಟ್ಟುವಿನ ಕೃಷ್ಣ ಶೆಟ್ಟಿಗಾರ್‌ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯುಂಟಾಗಿದೆ. ಈ ಸಂದರ್ಭ ಮನೆಗೆ ಬೆಂಕಿ ಹತ್ತಿ ನಷ್ಟ ಸಂಭವಿಸಿದ್ದು ಅಗ್ನಿಶಾಮಕ ದಳ ಆಗಮಿಸದ್ದಾದರೂ ರಸ್ತೆಯಲ್ಲಿ ಮರ ಉರುಳಿ ಬಿದ್ದ ಪರಿಣಾಮ ಮುನಿಯಾಲಿನಿಂದ ಮುಂದೆ ಬರಲು ಸಾಧ್ಯವಾಗಲಿಲ್ಲ.

ಏಳ್ಳಾರೆ ಕುಕ್ಕುಜೆಯಲ್ಲೂ ಹಾನಿ: ಕಡ್ತಲ ಏಳ್ಳಾರೆ ಕುಕ್ಕುಜೆ ಗ್ರಾಮಗಳಲ್ಲೂ ಭಾರೀ ಗಾಳಿಗೆ ಮರಗಳೂ ಉರುಳಿ ಬಿದ್ದು ಸುಮಾರು 200 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಮುನಿಯಾಲು ಏಳ್ಳಾರೆ ಕುಕ್ಕುಜೆ ಕಡ್ತಲ ಗ್ರಾಮಗಳ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದೆ. ಘಟನೆ ತಿಳಿಯುತ್ತದ್ದಂತೆ ಹೆಬ್ರಿ ತಹಶೀಲ್ದಾರ್‌ ಮತ್ತು ಸಿಬ್ಬಂದಿಯವರು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

No Comments

Leave A Comment