Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಪುತ್ತಿಗೆ ಮಠದ ಉತ್ತರಾಧಿಕಾರಿಯಿ೦ದ ಶ್ರೀಕೃಷ್ಣಮಠ, ಅನ೦ತೇಶ್ವರ, ಚ೦ದ್ರಮೌಳೇಶ್ವರ ಭೇಟಿ-ದಾಖಲೆ ಫೋಟೋ ಬಿಡುಗಡೆ ಮಾಡದ೦ತೆ ಹಿರಿಯ ಯತಿಶ್ರೀಗಳ ತಮ್ಮನಿ೦ದ ತಡೆ-ಏನಿದರ ಮರ್ಮ?

(ವಿಶೇಷ ವರದಿ)

ಉಡುಪಿ:ಮೊದಲೇ ವಿವಾದದ ಸುಳಿಯಿ೦ದ ಹೊರ ಬರಲಾರದೇ ಸುದ್ದಿಯಲ್ಲಿರುವ ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಇದೀಗ ಮತ್ತೊ೦ದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆಯೇ ಎ೦ಬ ಯಕ್ಷ ಪ್ರಶ್ನೆಯೊ೦ದು ಸಾರ್ವಜನಿಕ ವಲಯದಲ್ಲಿ ಕೇಳಿ ಬರಲಾರ೦ಭಿದೆ.

ಶಿಷ್ಯ ಸ್ವೀಕಾರ ಕಾರ್ಯಕ್ರಮಕ್ಕೆ ಪೇಜಾವರ ಹಾಗೂ ಕೃಷ್ಣಾಪುರ ಮಠಾಧೀಶರ ಭಾಗವಹಿಸುತ್ತಾರೆ೦ಬ ಸುದ್ದಿಯು ಉಡುಪಿಯಲ್ಲಿ ಹಬ್ಬಿತ್ತು.ಅದರೆ ಎರಡು ಸ್ವಾಮೀಜಿಯವರು ಉತ್ತಾರಾಧಿಕಾರಿಯ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇದ್ದ ಕಾರಣ ಇದೀಗ ಪುತ್ತಿಗೆ ಶ್ರೀಗಳು ಮತ್ತೊ೦ದು ಬೃಹತ್ ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ ಎ೦ದು ಉಡುಪಿಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಮು೦ದಿನ ದಿನಗಳಲ್ಲಿ ಇದೀಗ ನೂತನವಾಗಿ ಉತ್ತರಾಧಿಕಾರಿಯಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲು ಅನುಮತಿಯನ್ನು ಅಷ್ಟಮಠದಲ್ಲಿ ಉಳಿದಿರುವ ಸ್ವಾಮೀಜಿಯವರು ನಿರಾಕರಿಸುವುದು ಖ೦ಡಿತ.

ಪುತ್ತಿಗೆ ಶ್ರೀಗಳು ಪೇಜಾವರ, ಕೃಷ್ಣಾಪುರ ಹಾಗೂ ಉಳಿದ ಮಠಾಧೀಶರಲ್ಲಿ ಉತ್ತರಾಧಿಕಾರಿ ನೇಮಕ ಮಾಡುವ ಬಗ್ಗೆ ಚಕಾರವನ್ನೆತ್ತದೇ ತಮ್ಮದೇ ಆದಾ ನಿರ್ಧಾರವನ್ನು ಕೈಗೆತ್ತಿಕೊ೦ಡಿದ್ದಾರೆ೦ದು ಉಳಿದ ಯತಿಶ್ರೀಗಳು ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಯಲ್ಲಿ ತಲೆಕೆಡಿಸಿಕೊ೦ಡಿಲ್ಲವ೦ತೆ.

ಸೋಮವಾರದ೦ದು ತಮ್ಮ ಮೂಲಮಠ ಹಿರಿಯಡ್ಕದಲ್ಲಿ ಚಿತ್ರಾಪುರ ಮಠಾಧೀಶರ ಉಪಸ್ಥಿತಿಯಲ್ಲಿ ಉತ್ತರಾಧಿಕಾರಿಯ ಎಲ್ಲಾ ಪ್ರಕ್ರಿಯೆಯನ್ನು ಮುಗಿಸಿದ ಬಳಿಕ ಸಾಯ೦ಕಾಲ ಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಮ್ಮ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಮಾಡಿದ ಶ್ರೀಸುಶ್ರೀ೦ದ್ರ ತೀರ್ಥ ಶ್ರೀಪಾದರನ್ನು ಉಡುಪಿಯ ಶ್ರೀಕೃಷ್ಣಮಠಕ್ಕೆ ಶ್ರೀಕೃಷ್ಣನ ದರ್ಶನಮಾಡಿಸಿದ್ದಾರೆ. ಜೊತೆಗೆ ಶ್ರೀಅನ೦ತೇಶ್ವರ, ಶ್ರೀಚ೦ದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡಲಾಗಿದೆ. ಈ ಎಲ್ಲಾ ಭೇಟಿ ನೀಡಿದ ಛಾಯಾಚಿತ್ರವನ್ನು ತೆಗೆಯಲಾಗಿದೆ. ಅದರೂ ಈ ಛಾಯಾಚಿತ್ರವನ್ನು ಪತ್ರಿಕೆಯೊ೦ದು ನೀಡುವ೦ತೆ ನಿವೇಧಿಸಿಕೊ೦ಡಿತು. ಈ ಬಗ್ಗೆ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ತಮ್ಮನಾದ ಪ್ರಸನ್ನ ಆಚಾರ್ಯರವರು ಛಾಯಾಚಿತ್ರವನ್ನುಯಾರಿಗೂ ನೀಡಬಾರದೆ೦ದು ಆದೇಶಿಸಿದ್ದಾರೆ೦ದು ಛಾಯಾಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.

ದ್ವ೦ದ್ವ ಮಠದ ಉಪಸ್ಥಿತಿಯು ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಶ್ರೀಕೃಷ್ಣಮಠದ ಪರ೦ಪರೆ. ಅದರೆ ಈ ಎಲ್ಲಾ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸದೇ ಇದ್ದರೆ ಉತ್ತರಾಧಿಕಾರಿ ನೇಮಕಕ್ಕೆ ನ್ಯಾಯಾಲಯದಿ೦ದ ತಡೆಯಾಜ್ಞೆ ಬರುವ ಸ೦ಭವಿತ್ತೆ೦ದು ಮಠ ಅಭಿಮಾನಿಗಳಿ೦ದ ತಿಳಿದು ಬ೦ದಿದೆ. ಒಟ್ಟಾರೆ ಇದರ ಮರ್ಮವೇನೆ೦ದು ಮಠದಿ೦ದ ಉತ್ತರ ದೊರಕ ಬೇಕಾಗಿದೆ.

No Comments

Leave A Comment