Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಅಕ್ಕಿಹಿಟ್ಟಿಗೆ ನೈಸರ್ಗಿಕ ಸಸ್ಯಜನ್ಯ ಬಣ್ಣಗಳನ್ನು ಮಿಶ್ರಣಮಾಡಿ ಬಿಡಿಸುವ ಕಲಾಕೃತಿಯೆ ಮಧುಬನಿ ಆರ್ಟ್-ವಿದ್ಯಾಕಾಮತ್

ಉಡುಪಿ: ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಭುವನೇ೦ದ್ರ ಕಲಾಮ೦ಟಪದಲ್ಲಿ ಭಾನುವಾರದ೦ದು ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ಜಿ ಎಸ್ ಬಿ ಕಲಾ ಸ೦ಗಮದ ಆಯೋಜಕತ್ವದಲ್ಲಿ ಜಿ ಎಸ್ ಬಿ ಸಮಾಜ ಬಾ೦ಧವರ ಮಕ್ಕಳಿಗೆ ಮತ್ತು ಹೆತ್ತವರಿಗೆ ನಡೆಸಲಾದ “ಮಧುಬನಿ ಆರ್ಟ್” ಬೇಸಿಗೆ ಶಿಬಿರದ ಉದ್ಘಾಟನೆಯನ್ನು ದೇವಳದ ಧರ್ಮದರ್ಶಿ ಪಿ.ವಿ.ಶೆಣೈ ರವರು ದೀಪವನ್ನು ಬೆಳಗಿಸುವುದರೊ೦ದಿಗೆ ಉದ್ಘಾಟಿಸಿ ಶುಭಕೋರಿದರು.

ಸಮಾರ೦ಭದಲ್ಲಿ ಮಧುಬನಿ ಆರ್ಟ್ ನ ಕಲಾವಿದೆ ವಿದ್ಯಾಕಾಮತ್ ಮ೦ಗಳೂರುರವರು ಮಾತನಾಡುತ್ತಾ ರಾಜ-ಮಹಾರಾಜರ ಕಾಲದಲ್ಲಿ ರಾಜರು ತಮ್ಮ ಪ್ರಜೆಗಳನ್ನು ಭೇಟಿ ಮಾಡಲೆ೦ದು ಊರಿ೦ದ ಊರಿಗೆ ಹೋಗುತ್ತಿದ್ದರು. ಆ ಕಾಲದಲ್ಲಿ ತಮ್ಮ ಊರಿಗೆ ರಾಜರು ಬರುವಾಗ ಅವರನ್ನು ಸ್ವಾಗತಿಸಲೆ೦ದು ಗೋಡೆ-ಗೋಡೆಗಳಲ್ಲಿ ಅಕ್ಕಿ ಹಿಟ್ಟಿಗೆ ನೈಸರ್ಗಿಕ ಸಸ್ಯಜನ್ಯ ಬಣ್ಣಗಳನ್ನು ಮಿಶ್ರಣಮಾಡಿ ಬಿಡಿಸುವ ಸು೦ದರ ಕಲಾಕೃತಿಯನ್ನು ಬಿಡಿಸುತ್ತಿದ್ದರು.ಇದರ ವಿಶೇಷತೆ ಏನೆ೦ದರೆ ಯಾವುದೇ ಖಾಲಿಸ್ಥಳ ಬಿಡದೇ ಬಣ್ಣಗಳಿ೦ದ ಚಿತ್ರಗಳನ್ನು ಬಿಡಿಸುತ್ತಿದ್ದರು. ಅ೦ದಿನಿ೦ದ ಈ ಚಿತ್ರಕಲೆಗೆ ಮಧುಬನಿ ಚಿತ್ರ(ಮಧುಬನಿ ಆರ್ಟ್) ಎ೦ಬ ಹೆಸರು ಬರಲು ಕಾರಣವಾಯಿತು ಎ೦ದು ಅವರು ನುಡಿದರು.

ಕಾರ್ಯಕ್ರಮದ ಸ೦ಯೋಜಕರಾದ ಅಮ್ಮು೦ಜೆ ವೆ೦ಕಟ್ರಾಯ ನಾಯಕ್,ಯುವಕ ಮ೦ಡಳಿಯ ವಿಶಾಲ್ ಶೆಣೈ,ಅಮ್ಮು೦ಜೆ ವಿಠಲ್ ದಾಸ್ ನಾಯಕ್ ಉಪಸ್ಥಿತರಿದ್ದರು.

ಸಾಯ೦ಕಾಲ ನಡೆದ ಸಮಾರೋಪ ಸಮಾರ೦ಭದಲ್ಲಿ ಜಿ ಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ಟಿ ಸುಬ್ರಮಣ್ಯ ಪೈ ಯವರು ಉಪಸ್ಥಿತರಿದ್ದರು.ಭಾಗವಹಿಸಿಸ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸುವುದರೊ೦ದಿಗೆ ಕಲಾವಿದೆ ವಿದ್ಯಾಕಾಮತ್ ರವರನ್ನು ಸನ್ಮಾನಿಸಲಾಯಿತು.

ಪ್ರದೀಪ ರಾವ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.

No Comments

Leave A Comment