
ಚಿತ್ರದುರ್ಗದಲ್ಲಿ ಭೀಕರ ಅಪಘಾತ, ಬೆಂಗಳೂರಿನ ಮೂವರು ವಿದ್ಯಾರ್ಥಿಗಳ ದುರ್ಮರಣ
ಚಿತ್ರದುರ್ಗ: ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸೋಮವಾರ ನಸುಕಿನ ಜಾವ ಚಿತ್ರದುರ್ಗ ನಗರದ ಜಿಎಂಟಿ ವೃತ್ತದ ಸಮೀಪ ನಡೆದ ಅಪಘಾತದಲ್ಲಿ ಬೆಂಗಳೂರಿನವರಾದ ಕಾರ್ತಿಕ್ ಗೌಡ(20), ಹರ್ಷ(20), ಶ್ರೀನಿಧಿ(20) ಎಂಬುವವರು ಸಾವನ್ನಪ್ಪಿದ್ದಾರೆ.