Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಲಂಕಾ ಸ್ಫೋಟ; ಬೆಂಗಳೂರಿನ ಇಬ್ಬರ ದುರ್ಮರಣ, 5 ಮಂದಿ ಕನ್ನಡಿಗರು ನಾಪತ್ತೆ

ಬೆಂಗಳೂರು/ನವದೆಹಲಿ:ಈಸ್ಟರ್ ದಿನವಾದ ರವಿವಾರ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸಂಭವಿಸಿದ್ದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 290ಕ್ಕೆ ಏರಿದ್ದು, ಬೆಂಗಳೂರಿನ ಇಬ್ಬರು ಕನ್ನಡಿಗರು ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದ ಕನ್ನಡಿಗರ ಸಂಖ್ಯೆ 3ಕ್ಕೆ ಏರಿದೆ. ಅಲ್ಲದೇ ಏಳು ಮಂದಿ ಕನ್ನಡಿಗರು ನಾಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬೆಂಗಳೂರಿನ 8ನೇ ಮೈಲಿ ನಿವಾಸಿ ಹನುಮಂತರಾಯಪ್ಪ ಹಾಗೂ ಎಂ.ರಂಗಪ್ಪ ಸಾವನ್ನಪ್ಪಿರುವುದಾಗಿ ಸುಷ್ಮಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಶ್ರೀಲಂಕಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಸುರತ್ಕಲ್ ಮೂಲದ ಮಹಿಳೆ ರಝೀನಾ(58) ಮೃತಪಟ್ಟಿದ್ದರು. ಇದೀಗ ಬೆಂಗಳೂರಿನ ಇಬ್ಬರು ಸೇರಿದಂತೆ ಮೂವರು ಕನ್ನಡಿಗರು ಸಾವನ್ನಪ್ಪಿದಂತಾಗಿದೆ.

No Comments

Leave A Comment