Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಏ.22(ನಾಳೆ) ಪುತ್ತಿಗೆ ಶ್ರೀಗಳಿ೦ದ ಶಿಷ್ಯಸ್ವೀಕಾರ ಸಮಾರಂಭ

ಉಡುಪಿ: ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಮದುಪೇಂದ್ರ ತೀರ್ಥ ಶ್ರೀ ಪಾದರ 750 ವರ್ಷಗಳ ಗುರುಪರಂಪರೆಯಲ್ಲಿ ಮೂವತ್ತನೇ ಯತಿಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿ ವಿಶ್ವದಾದ್ಯಂತ ಧರ್ಮಪ್ರಸಾರ ಮಾಡುವವರಾಗಿ ನಾಳೆಗೆ 45 ಸಂವತ್ಸರಗಳನ್ನು ಪೂರೈಸಲಿದ್ದು ಈ ಶುಭ ಸಂದರ್ಭದಲ್ಲಿ ಶ್ರೀ ಗಳು ಶ್ರೀ ಪ್ರಶಾಂತ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ಸಂಕಲ್ಪಿಸಿದ್ದು ಈ ಸಂಭಂಧ ಹಿರಿಯಡ್ಕ ಸಮೀಪದ ಶ್ರೀ ಪುತ್ತಿಗೆ ಗ್ರಾಮದಲ್ಲಿರುವ ಶ್ರೀ ಪುತ್ತಿಗೆ ಮಠದ ಮೂಲ ಮಠದಲ್ಲಿ ಏಪ್ರಿಲ್ 22ರ ಸೋಮವಾರದ೦ದು 11-45 ಕ್ಕೆ ಸರಳ ಸಮಾರಂಭವು ನಡೆಯಲಿದೆ.

ಕರಾವಳಿಕಿರಣ ಡಾಟ್ ಕಾ೦ ನಿನ್ನೆ(ಶನಿವಾರದ೦ದು)ಶಿಷ್ಯ ಸ್ವೀಕಾರ ಸುದ್ದಿಯನ್ನು ಯಾರು ಒಪ್ಪುತ್ತಿರಲಿಲ್ಲ ಅದರೆ ಡಾಟ್ ಕಾ೦ ವರದಿಯು ಫಲಶೃತಿವರದಿಗಾಗಿ ಕರಾವಳಿಕಿರಣ ದಾಟ್ ಕಾ೦ ಯಾವತ್ತು ಸತ್ಯ ಸುದ್ದಿಯನ್ನೇ ಪ್ರಕಟಿಸುವುದು ಎ೦ಬುದಕ್ಕೆ ನಿನ್ನೆಯ ಸುದ್ದಿಯೇ ಸಾಕ್ಷಿ. 

 

No Comments

Leave A Comment