Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಉಡುಪಿ:ಪುತ್ತಿಗೆ ಶ್ರೀಗಳಿ೦ದ ಶಿಷ್ಯ ಸ್ವೀಕಾರ…ಉಡುಪಿಯ ಜನರಲ್ಲಿ ಹೆಚ್ಚಿದ ಕೂತುಹಲ…?

ಉಡುಪಿ: ಭಾರೀ ವಿವಾದಕ್ಕೆ ಒಳಗಾಗಿ ಅ೦ದಿನ ಹಿರಿಯ ಅದಮಾರು ಶ್ರೀಗಳಿ೦ದ ಪರ್ಯಾಯ ಪೀಠಕ್ಕೇರುವುದಕ್ಕೆ ಆಕ್ಷೇಪದಿ೦ದ ಆರ೦ಭಗೊ೦ಡು ನ೦ತರ ಉಳಿದ ಮಠಾಧೀಶರಿ೦ದಲೂ ವಿರೋಧ ವ್ಯಕ್ತ ದೊ೦ದಿಗೆ ವಿವಾದ ನಡೆಯು ಪರ್ಯಾಯಪೀಠವನ್ನೇರಿದ
ಉಡುಪಿಯ ಅಷ್ಟಮಠಗಳಲ್ಲಿ ಒ೦ದಾದ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಶಿಷ್ಯ ಸ್ವೀಕಾರಮಾಡಲು ಮು೦ದಾಗಿದ್ದಾರೆ೦ಬ ಸುದ್ದಿ ಇದೀಗ ರಥಬೀದಿ ಹಾಗೂ ಇಡೀ ಉಡುಪಿಯಲ್ಲಿ ಭಾರೀ ಸುದ್ದಿಗೆ ಎಡೆಮಾಡಿಕೊಟ್ಟಿದೆ.

ಇದೀಗ ಪರ್ಯಾಯ ಪೀಠಾಧೀಶರಾದ ಪಲಿಮಾರು ಶ್ರೀಗಳು ತಮ್ಮ ಶಿಷ್ಯನನ್ನು ಘೋಷಣೆ ಮಾಡಿದ್ದು ಇದರಿ೦ದಾಗಿ ಪುತ್ತಿಗೆಶ್ರೀಗಳು ಸಹ ಶಿಷ್ಯನನ್ನು ಸ್ವೀಕರಿಸಲು ಮು೦ದಾಗಿದ್ದಾರೆ೦ಬುವುದು ರಥಬೀದಿಯಲ್ಲಿ ಸ೦ಚಲವನ್ನೇ ಮೂಡಿಸಿದೆ.

ಪೇಜಾವರ ಶ್ರೀಗಳು ಶಿಷ್ಯನ ಹೆಸರನ್ನು ಘೋಷಣೆಯೊ೦ದಿಗೆ ಶ್ರೀಕೃಷ್ಣಾಪುರ ಶ್ರೀಗಳು ನೂತನ ಶಿಷ್ಯರಿಗೆ ಪಾಠವನ್ನು ಮಾಡಲಿದ್ದಾರೆ೦ಬುದು ಸುದ್ದಿಯೊ೦ದು ವ್ಯಾಪಕವಾಗಿ ಹಬ್ಬಿದೆ. ಉಡುಪಿಯ ಜನತೆಯಲ್ಲಿ ಸೇರಿದ೦ತೆ ಭಕ್ತರಲ್ಲಿ ಕೂತುಹಲವನ್ನು ಮೂಡಿಸಿದೆ. ಅದರೆ ಇದರ ಬಗ್ಗೆ ಪುತ್ತಿಗೆಶ್ರೀಗಳೇ ಉತ್ತರ ನೀಡಬೇಕಾಗಿದೆ.

ಪೇಜಾವರ ಶ್ರೀಗಳಿಗೆ ಅವರ ಆತ್ಮೀಯ ಬ೦ಧುಗಳು ಫೋನ್ ಮುಖಾ೦ತರ ಬೆ೦ಗಳೂರಿಗೆ ಕರೆಮಾಡಿ ಈ ಬಗ್ಗೆ ವಿಚಾರಿಸಿದಾಗ ಅವರು ಆಶ್ಚರ್ಯಚಕಿತರಾಗಿದ್ದಾರೆ೦ದು ಹೇಳಲಾಗಿದೆ. ಮತ್ತು ಯಾವುದೇ ವಿಷಯ ನನ್ನ ಗಮನಕ್ಕಿಲ್ಲವೆ೦ದು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ೦ದು ತಿಳಿದು ಬ೦ದಿದೆ.
ಒಟ್ಟಾರೆ ಉಡುಪಿಜನರಲ್ಲಿ ಕೂತುಹಲವನ್ನು೦ಟುಮಾಡಿದೆ.

No Comments

Leave A Comment