Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಪೂರ್ವ ಎಕ್ಸ್‌ ಪ್ರೆಸ್‌ ರೈಲು ಹಳಿತಪ್ಪಿ 14 ಪ್ರಯಾಣಿಕರಿಗೆ ಗಾಯ

ಕಾನ್ಪುರ: ಇಲ್ಲಿನ ರೂಮಾ ರೈಲು ನಿಲ್ದಾಣದ ಸಮೀಪ ಹೌರಾ – ನವದೆಹಲಿ ‘ಪೂರ್ವ’ ಎಕ್ಸ್‌ ಪ್ರೆಸ್‌ ರೈಲಿನ 12 ಬೋಗಿಗಳು ಹಳಿತಪ್ಪಿದ ಕಾರಣ ಕನಿಷ್ಠ 14 ಪ್ರಯಾಣಿಕರು ಗಾಯಗೊಂಡಿರುವ ಕುರಿತು ವರದಿಯಾಗಿದೆ.

ಹಳಿ ತಪ್ಪಿರುವ 12 ಬೋಗಿಗಳಲ್ಲಿ ನಾಲ್ಕು ಬೋಗಿಗಳು ಸಂಪೂರ್ಣ ಮಗುಚಿಬಿದ್ದಿವೆ. ಈ ರೈಲು ಪ್ರಯಾಗದಿಂದ ನವದೆಹಲಿಗೆ ಸಾಗುತ್ತಿತ್ತು. ಘಟನೆಯಲ್ಲಿ ಇದುವರೆಗೆ ಯಾವುದೆ ಪ್ರಾಣಹಾನಿಗಳಾಗಿರುವ ಕುರಿತಾಗಿ ವರದಿಯಾಗಿಲ್ಲ.

ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಮತ್ತು ಗಾಯಾಳುಗಳಲ್ಲಿ ಹಲವರು ಪ್ರಾಥಮಿಕ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಸುರಕ್ಷತಾ ಕಮಿಷನರ್‌ ಎ.ಕೆ. ಜೈನ್‌ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ.

No Comments

Leave A Comment