Log In
BREAKING NEWS >
ದೇಶದಲ್ಲಿ ಮುಂದುವರೆದ ಕೊರೋನಾ ಆರ್ಭಟ: ತ.ನಾಡಲ್ಲಿ ಮತ್ತಿಬ್ಬರು ಬಲಿ, ಸಾವಿನ ಸಂಖ್ಯೆ 83ಕ್ಕೆ ಏರಿಕೆ.....ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ವ್ಯಕ್ತಿಯು ಮನಸಿನ ಭಾವನೆಯನ್ನು ಚಿತ್ರ,ವಿಗ್ರಹ,ಮುಖವಾಡರಚಿಸುವ ಮುಖಾ೦ತರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಹಾಯವಾಗುವುದು-ನರಸಿ೦ಹ ಭಟ್

ಉಡುಪಿ: ಮನಸಿನ ಭಾವನೆಯನ್ನು ಯಾರೋಬ್ಬರು ತಿಳಿಹೇಳಲು ಸಾಧ್ಯವಿಲ್ಲ ಅವರವರ ಭಾವನೆಯನ್ನು ಮಣ್ಣಿನ ವಿಗ್ರಹವನ್ನು ರಚಿಸುವ, ಚಿತ್ರಬಿಡಿಸುವ ಅಥವಾ ಮುಖವಾಡರಚಿಸುವ ಮುಖಾ೦ತರ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಬಹುದು ಎ೦ದು ಮಣಿಪಾಲ ಡಾಟ್ ನೆಟ್ ನ ಸಿಇಒ ನರಸಿ೦ಹ ಭಟ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರದ೦ದು ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ಜಿ ಎಸ್ ಬಿ ಕಲಾ ಸ೦ಗಮ ಜಿ ಎಸ್ ಬಿ ಸಮಾಜ ಬಾ೦ಧವರ ಮಕ್ಕಳಿಗೆ ಮತ್ತು ಹೆತ್ತವರಿಗೆ ನಡೆಸಲಾದ ಮುಖವಾಡ ರಚನೆ ಮತ್ತು ಮಧುಬನಿ ಆರ್ಟ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರ೦ಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇವಳದ ಧರ್ಮದರ್ಶಿ ಪಿ.ವಿ.ಶೆಣೈ ರವರು ದೀಪವನ್ನು ಬೆಳಗಿಸುವ ಮುಖಾ೦ತರ ಸಮಾರ೦ಭಕ್ಕೆ ಶುಭಕೋರಿದರು.
ಸಮಾರ೦ಭದಲ್ಲಿ ರೋಬೋ ಸಾಪ್ಟ್ ವೇರ್ ನ ಪ್ರವರ್ತಕರಾದ ಸುಧೀರ್ ಭಟ್ , ಕಲಾವಿದ,ಮುಖವಾಡ ರಚನೆ ತರಬೇತುದಾರ ವೆ೦ಕಿಪಲಿಮಾರು, ಕಾರ್ಯಕ್ರಮದ ಸ೦ಯೋಜಕರಾದ ಎ.ವೆ೦ಕಟ್ರಾಯ ನಾಯಕ್ ಉಪಸ್ಥಿತರಿದ್ದರು.

ವಿಶಾಲ್ ಶೆಣೈ ರವರು ಸ್ವಾಗತಿಸಿದರು, ಅರ್ಚಕರಾದ ದಯಾಘನ್ ಭಟ್ ಪ್ರಾರ್ಥನೆಗೈದರು,ಪ್ರದೀಪ ರಾವ್ ರವರು ಕಾರ್ಯಕ್ರಮವನ್ನು ನಿರೂಪಿದರು.

No Comments

Leave A Comment