Log In
BREAKING NEWS >
““““““““‘ಸಮಸ್ತ ಕ್ರೈಸ್ತ ಸಮಾಜ ಬಾ೦ಧವರಿಗೆ ಗುಡ್ ಫ್ರೈಡ್ ಹಬ್ಬದ ಶುಭಾಶಯಗಳು”””””’

ಬಲೂಚಿಸ್ತಾನ್; ಬಸ್ ನೊಳಗಿದ್ದ 14 ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಬಂದೂಕುಧಾರಿ!

ಇಸ್ಲಾಮಾಬಾದ್: ಬಸ್ ನಲ್ಲಿದ್ದ 14 ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಪಾಕಿಸ್ತಾನದ ವಾಯುವ್ಯ ಪ್ರದೇಶದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗುರುವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ದಾಳಿಕೋರ ಅರೆಸೇನಾಪಡೆಯ ಸಮವಸ್ತ್ರ ಧರಿಸಿರುವುದಾಗಿ ಪ್ರಾಂತೀಯ ಗೃಹ ಕಾರ್ಯದರ್ಶಿ ಹೈದರ್ ಅಲಿ ಎಎಫ್ ಪಿಗೆ ವಿವರಿಸಿದ್ದಾರೆ.

ಶಸ್ತ್ರಸಜ್ಜಿತ ವ್ಯಕ್ತಿ ಬಸ್ ಅನ್ನು ನಿಲ್ಲಿಸಿ, ಒಳನುಗ್ಗಿ ಕುಳಿತಿದ್ದ 14 ಪ್ರಯಾಣಿಕರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಘಟನೆ ಬಗ್ಗೆ ಈವರೆಗೂ ಯಾವ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ. ಕಳೆದ ವಾರವಷ್ಟೇ ಕ್ವೆಟ್ಟಾದಲ್ಲಿ ಸಂಭವಿಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿದ್ದರು.

No Comments

Leave A Comment