Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಅಕಾಲಿಕ ಮಳೆಯಿಂದ 50 ಸಾವು

ಹೊಸದಿಲ್ಲಿ: ದೇಶದ 4 ರಾಜ್ಯಗಳಲ್ಲಿ ಮಂಗಳವಾರ ರಾತ್ರಿಯಿಂದ ಈಚೆಗೆ ಸುರಿದ ಧಾರಾಕಾರ ಅಕಾಲಿಕ ಮಳೆಗೆ 50 ಮಂದಿ ಅಸುನೀಗಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಈ ದುರಂತ ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ ಮತ್ತು ಬೆಳೆನಷ್ಟ ಉಂಟಾ ಗಿದೆ. ರಾಜಸ್ಥಾನದಲ್ಲಿ 21 ಮಂದಿ ಅಸುನೀಗಿದ್ದರೆ, ಮಧ್ಯಪ್ರದೇಶದಲ್ಲಿ 15, ಗುಜರಾತ್‌ನಲ್ಲಿ 10, ಮಹಾರಾಷ್ಟ್ರದಲ್ಲಿ ಮೂವರು ಅಸುನೀಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಉತ್ತರ, ಈಶಾನ್ಯ ಭಾರತಗಳಲ್ಲಿ ಗುಡುಗು, ಸಿಡಿಲುಗಳು ಉಂಟಾಬಹುದು. ಕರಾವಳಿ ಕರ್ನಾಟಕ, ಕೇರಳ ತಮಿಳುನಾಡು ಕರಾವಳಿ ಪ್ರದೇಶ ಗಳಲ್ಲಿಯೂ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿಯ ಜತೆಗೆ ಗುಡುಗು-ಸಿಡಿಲು ಅಪ್ಪಳಿ ಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಪ್ರಧಾನಿ ಸಂತಾಪ ವ್ಯಕ್ತಪಡಿಸಿ, ಅಸುನೀಗಿದವರ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನೂ ಪ್ರಕಟಿಸಿದ್ದಾರೆ. ಈ ಬೆಳವಣಿಗೆಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಕೇವಲ ಗುಜರಾತ್‌ನಲ್ಲಿ ಉಂಟಾದ ಸಾವು ನೋವಿನ ಬಗ್ಗೆ ಮಾತ್ರ ಸ್ಪಂದಿಸಿದ್ದಾರೆ. ನೀವು ಗುಜರಾತ್‌ಗೆ ಮಾತ್ರ ಪ್ರಧಾನಿಯಲ್ಲ, ದೇಶಕ್ಕೆ ಪ್ರಧಾನಿ ಎಂದು ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಹೇಳಿ ದ್ದಾರೆ. ಮಧ್ಯ ಪ್ರದೇಶ ಸಿಎಂ ದುರಂತದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಬಿಜೆಪಿ ಸಂಸದ ಅನಿಲ್‌ ಬುಲಾನಿ ಟೀಕಿಸಿದ್ದಾರೆ.

No Comments

Leave A Comment