Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಭಾರತದ ಎ-ಸ್ಯಾಟ್‌ ಮಿಸೈಲ್‌ನಿಂದ ಚೀನ ವಿರುದ್ಧದ ಪೈಪೋಟಿ ಹೆಚ್ಚಲಿದೆ: ಅಮೆರಿಕ ಪರಿಣತ

ವಾಷಿಂಗ್ಟನ್‌ : ಭಾರತ ಕಳೆದ ತಿಂಗಳಲ್ಲಿ ಯಶಸ್ವಿಯಾಗಿ ನಡೆಸಿರುವ ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯು ಚೀನವನ್ನೇ ನೇರವಾಗಿ ಗುರಿ ಇರಿಸಿಕೊಂಡಿರುವುದರಿಂದ ಬೀಜಿಂಗ್‌ ಮತ್ತು ಹೊಸದಿಲ್ಲಿ ನಡುವಿನ ಪೈಪೋಟಿ ಹೆಚ್ಚಾಗುವ ಸಂಭವವಿದೆ ಎಂದು ಅಮೆರಿಕದ ಉನ್ನತ ಪರಿಣತ ಹೇಳಿದ್ದಾರೆ.

ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯ ಹೊರತಾಗಿಯೂ ಭಾರತ ಬಾಹ್ಯಾಕಾಶ ಸ್ಪರ್ಧೆಯಲ್ಲಿ ತೊಡಗಲು ಸುದೀರ್ಘ‌ ಮಾರ್ಗವನ್ನು ಕ್ರಮಿಸಬೇಕಾಗಿದೆ ಎಂದವರು ಹೇಳದ್ದಾರೆ.

ಭಾರತ ಕಳೆದ ಮಾರ್ಚ್‌ 27ರಂದು ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಈ ಸಾಧನೆಗೈದಿರುವ ವಿಶ್ವದ ಇತರ ಮೂರು ರಾಷ್ಟ್ರಗಳಾಗಿರುವ ಅಮೆರಿಕ, ರಶ್ಯ ಮತ್ತು ಚೀನದ ಸಾಲಿಗೆ ಸೇರಿದೆ ಎಂದು ಅಮೆರಿಕ ಪರಿಣತ ಆ್ಯಶ್‌ಲೇ ಜೆ ಟೆಲಿಸ್‌ ಹೇಳಿದರು.

No Comments

Leave A Comment