Log In
BREAKING NEWS >
ನ್ಯಾಯಬೆಲೆ ಅ೦ಗಡಿಯಲ್ಲಿ ಪಡಿತರ ವಿತರಣೆಗೆಗಾಗಿ ಪರದಾಟ-ರಾಜ್ಯಸರಕಾರದಿ೦ದ ಜನರಿಗೆ ಭಾರೀ ಅನ್ಯಾಯ-ಜನರಿ೦ದ ಆಕ್ರೋಶ ....

ನಾಲ್ಕು ರಾಜ್ಯಗಳಲ್ಲಿ ಮಳೆ, ಬಿರುಗಾಳಿ, ಸಿಡಿಲ ಹೊಡೆತಕ್ಕೆ 34 ಮಂದಿ ಸಾವು, ಅನೇಕರಿಗೆ ಗಾಯ


ಹೊಸದಿಲ್ಲಿ :
 ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ನಿನ್ನೆ ಮಂಗಳವಾರ ಮಳೆ, ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನ ಹೊಡೆತಕ್ಕೆ ಕನಿಷ್ಠ 34 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮಧ್ಯ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಮಳೆ, ಗುಡುಗು, ಸಿಡಿಲು, ಬಿರುಗಾಳಿಯ ಹೊಡತಕ್ಕೆ ಸಿಲುಕಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಖಾರ್‌ಗೊನೆ ಜಿಲ್ಲೆಯಲ್ಲಿ ಮಳೆ ಸಂಬಂಧಿ ದುರಂತಕ್ಕೆ ಹಲವಾರು ಮನೆ – ಗುಡಿಸಲುಗಳು ಧಾರಾಶಾಹಿಯಾಗಿವೆ. ಖಾರ್‌ಗೊನೆ, ಉಪಾಡಿ, ಬಡಾ, ಪ್ರೇಮ್‌ ನಗರ್‌ ಗೊಗೋವಾನ್‌ ಮತ್ತು ಭೋಯಿನಂದಾ ಗ್ರಾಮಗಳಲ್ಲಿ ಮಳೆ ಸಂಬಂಧಿ ದುರಂತಗಳು ಅತ್ಯಧಿಕ ಸಂಖ್ಯೆಯಲ್ಲಿ ಘಟಿಸಿವೆ.

ಮಂಗಳವಾರ ಸಂಜೆ ಹಾಥೋಡ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಜಮೂದಿರ್‌ ಸರವಾರ್‌ ಗ್ರಾಮದಲ್ಲಿ ಹಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನೊಂದು ಜಿಲ್ಲೆಯಲ್ಲಿ ಸಿಡಿಲ ಹೊಡೆತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಒಬ್ಬ ವ್ಯಕ್ತಿ ಗಂಭೀರ

No Comments

Leave A Comment