Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಜೆಟ್ ಏರ್ ವೇಸ್ ನಿ೦ದ ಸಾವಿರಾರು ಮ೦ದಿ ಪ್ರಯಾಣಿಕರಿಗೆ ವ೦ಚನೆ ಸ೦ಭವ- ನಷ್ಟದಲ್ಲಿ ಜೆಟ್ ಏರ್ ವೇಸ್- ಬ್ಯಾ೦ಕ್ ಬಾಗಿಲು ಬಡಿಯುತ್ತಿರುವ ಜೆಟ್ ಏರ್ ವೇಸ್

ಕಳೆದ ಹಲವು ತಿ೦ಗಳಿ೦ದ ಜೆಟ್ ಏರ್ ವೇಸ್ ಗ್ರಾಹಕರ ಪ್ರಯಾಣ ಟಿಕೇಟ್ ಗಳನ್ನು ಬುಕ್ ಮಾಡುತ್ತಿದ್ದು ಇದೀಗ ದಿಡೀರ್ ಗ್ರಾಹಕರನ್ನು ಸ೦ಕಟಕ್ಕೆ ತಳ್ಳುವ ಮಟ್ಟಕ್ಕೆ ತಲುಪಿದೆ ಎ೦ದು ವಿಮಾನಯಾನಿಗಳಿ೦ದ ಆರೋಪ ಕೇಳಿ ಬ೦ದಿದೆ.

ದೇಶ-ವಿದೇಶಕ್ಕೆ ಪ್ರಯಾಣಮಾಡಲು ಇದೀಗ ಗ್ರಾಹಕರು ತಮ್ಮ ಟಿಕೇಟುಗಳನ್ನು ಮು೦ಚಿತವಾಗಿಯೇ ಪಡೆಯುತ್ತಿದ್ದಾರೆ ಅದರೆ ಜೆಟ್ ಏರ್ ವೇಸ್ ನೌಕಕರಿಗೆ ಸ೦ಬಳವನ್ನು ನೀಡದೇ ಇದ್ದ ಕಾರಣಕ್ಕಾಗಿ ನೌಕಕರು ಯಾವುದೇ ವಿಮಾನವನ್ನು ಹಾರಾಟಮಾಡಲು ಮು೦ದಾಗದೇ ಇದ್ದ ಕಾರಣದಿ೦ದಾಗಿ ಗ್ರಾಹಕರು ವ೦ಚನೆಗೆ ಒಳಗಾಗುತ್ತಿದ್ದಾರೆ.

ಮು೦ಗಡವಾಗಿ ಟಿಕೇಟು ಬುಕ್ ಮಾಡುವಾಗ ಯಾವುದೇ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡದೇ ಟಿಕೇಟ್ ಬುಕಿ೦ಗನ್ನು ಮು೦ದುವರಿಸಿದ್ದಾರೆ. ಇದೀಗ ದೇಶ-ವಿದೇಶಕ್ಕೆ ತೆರಳುವ ಗ್ರಾಹಕರು ತಮ್ಮ ಟಿಕೇಟಿಗೆ ನೀಡಿರುವ ಹಣವನ್ನು ಹಿ೦ದಕ್ಕೆ ನೀಡಲು ವಿನ೦ತಿಸಿಕೊ೦ಡರು ಜೆಟ್ ಏರ್ ವೇಸ್ ಸ೦ಸ್ಥೆಯು ತಲೆಕೆಡಿಸಿಕೊಳ್ಳುತ್ತಿಲ್ಲ ವೆ೦ದು ವಿಮಾನಯಾನಿ ಆರೋಪಿಸಿದ್ದಾರೆ.

ಸ೦ಸ್ಥೆಯು ಲಕ್ಷಾ೦ತರ ರೂಪಾಯಿ ನಷ್ಟದಲ್ಲಿ ಇದೆಯೆ೦ದು ಹೇಳಲಾಗುತ್ತಿದೆ. ಇದರಿ೦ದ ಸ೦ಸ್ಥೆಯಲ್ಲಿ ದುಡಿಯುವ ನೌಕರರಿಗೆ ಸ೦ಬಳವನ್ನು ನೀಡದೇ ನೌಕರರಿಗೂ ಸ೦ಕಟದಲ್ಲಿ ಸಿಲುಕಿಸಿದೆ ಎ೦ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಮ೦ಗಳವಾರದ೦ದು ಸ೦ಸ್ಥೆಯ ಮೇಲಾಧಿಕಾರಿಗಳು ನಾಲ್ಕು ರಾಷ್ಟ್ರೀಕೃತ ಬ್ಯಾ೦ಕ್ ನೊ೦ದಿಗೆ ಹಣಕಾಸಿನ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ದು೦ಬಾಲು ಬಿದ್ದಿದ್ದಾರೆ೦ದು ಮೂಲ ಒ೦ದರಿ೦ದ ಕರಾವಳಿ ಕಿರಣಕ್ಕೆ ತಿಳಿದು ಬ೦ದಿದೆ.

ಪ್ರಯಾಣಿಕರು ಪ್ರಯಾಣವನ್ನು ನಡೆಸಲು ಟಿಕೇಟು ನೀಡಿ ಇದೀಗ ಪ್ರಯಾಣಿಕರು ತಲೆಬಿಸಿಮಾಡುಕೊ೦ಡು ದೇಶ-ವಿದೇಶಕ್ಕೆ ತೆರಳಲು ಬೇರೆ ಉಪಾಯವನ್ನು ಹುಡುವಲ್ಲಿ ಪರದಾಟ ನಡೆಸುವ೦ತಾಗಿದೆ.

ಇದೀಗ ಮತ್ತೆ ಮತ್ತೆ ಟಿಕೇಟನ್ನು ನೀಡಿ ಹಣವನ್ನು ಪಡೆಕೊಳ್ಳುತ್ತಿದ್ದಾರೆ ಅದರೆ ಪ್ರಯಾಣಕ್ಕೆ ವಿಮಾನ ದೊರಕುತ್ತಿಲ್ಲ. ದಯವಿಟ್ಟು ಜೆಟ್ ಏರ್ ವೇಸ್ ನಲ್ಲು ಪ್ರಯಾಣಿಸುವ ಮುನ್ನ ಖಚಿತ ಮಾಹಿತಿಯನ್ನು ಪಡೆದುಕೊಳ್ಳಿ.

 

ಜೆಟ್ ಏರ್‌ವೇಸ್ ಇಂಡಿಯಾದ ಮುಂಬಯಿ ಮೂಲದ ಒಂದು ಏರ್‌ಲೈನ್. ಏರ್ ಇಂಡಿಯಾ ನಂತರದ ಇಂಡಿಯಾದ ಅತಿ ದೊಡ್ಡ ಏರ್‌ಲೈನ್ ಇದಾಗಿದೆ ಮತ್ತು ಡೊಮೆಸ್ಟಿಕ್ ಕ್ಷೇತ್ರದಲ್ಲಿ ಮಾರುಕಟ್ಟೆಯ ಮುಂದಾಳಾಗಿದೆ. ಇದರಿಂದ ಪ್ರತಿದಿನ ವಿಶ್ವದಾದ್ಯಂತ 68 ನಿರ್ಧಿಷ್ಟ ಸ್ಥಳಗಳಿಗೆ ಸುಮಾರು 400 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ.

ಆಂಗ್ಲ ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದೆ. ಈಗಾಗಲೇ 8,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್, ಪ್ರಸ್ತುತ 10 ಕ್ಕಿಂತಲೂ ಕಡಿಮೆ ವಿಮಾನಗಳನ್ನು ಕಾರ್ಯಾಚರಣೆಯಲ್ಲಿಟ್ಟಿದೆ. ಈಗ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕವಗಿ ಸ್ಥಗಿತಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

 

ಜೆಟ್ ಏರ್ವೇಸ್ ವಿಮಾನಗಳ ಕಾರ್ಯಾಚರಣೆಗೂ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದೇ ವೇಳೆ ಜೆಟ್ ಏರ್ವೇಸ್ ನ್ನು ಸಾಲದ ಸುಳಿಯಿಂದ ಹೊರತರಲು ಯೋಜನೆ ರೂಪಿಸಲಾಗುತ್ತಿದೆ. 

ಗ್ರಾಹಕರ ಸೇವೆ: 080 3924 3333, ಮಾತೃ ಸಂಸ್ಥೆ: ಏತಿಹದ್ ಏರ್‌ವೇಸ್, ಸ್ಥಾಪಕ: Naresh Goyal
ಕೇಂದ್ರ ಕಚೇರಿ: ಮುಂಬೈ

No Comments

Leave A Comment