Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಬೆಂಗಳೂರು: ಗೌರವ ಕೊಟ್ಟು ಮಾತಾಡಿಲ್ಲವೆಂದು ಸಹೋದ್ಯೋಗಿಯನ್ನೇ ಕೊಂದ!

ಬೆಂಗಳೂರು: ‘ತನಗೆ ಗೌರವ ಕೊಡಲಿಲ್ಲ’ ಎಂಬ ಕಾರಣದಿಂದ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಮಹಾಲಕ್ಷ್ಮಿಪುರಂ ಪೋಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮನೋಹರ್ ಪ್ರೇಮಚಂದ್ ವರ್ಮಾ (33) ಎಂದು ಗುರುತಿಸಲಾಗಿದೆ.ಈತ ಉತ್ತರ ಪ್ರದೇಶದ ಮೂಲದವನಾಗಿದ್ದು ಈತ ಜನವರಿ 15ರಂದು ತನ್ನ ಸಹೋದ್ಯೋಗಿ ರಮೇಶ್ ಎಂಬುವವನನ್ನು ಕೊಲೆ ಮಾಡಿ ತಲೆತಪ್ಪಿಸಿಕೊಂಡಿದ್ದ.

ಈ ಇಬ್ಬರೂ ಲಗ್ಗೆರೆಯಲ್ಲಿರುವ ಒಳಾಂಗಣ ಅಲಂಕಾರದ ಅಂಗಡಿ (ಇಂಟೀರಿಯರ್ ಡೆಕೋರೇಷನ್ ಶಾಪ್) ನಲ್ಲಿ ಕೆಲಸ ಮಾಡುತ್ತಿದ್ದರು. ಚೌಡೇಶ್ವರಿ ನಗರದಲ್ಲಿ ಇವರ ನಿವಾಸವಿದೆ. ಜನವರಿ 17ರಂದು ಅಂಗಡಿ ಮಾಲೀಕ ಲೋಕೇಶ್, ರಮೇಶ್ ಮನೆಗೆ ಹೋದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಅವರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ರಮೇಶ್ ಹತ್ಯೆ ನಂತರ ಅವರ ಕೋಣೆಯಲ್ಲಿದ್ದ ಸಹ್ಹಪಾಠಿಗಳು ನಾಪತ್ತೆಯಾಗಿದ್ದರು. ಅವರನ್ನು ಹುಡುಕಿ ವಿಚಾರಿಸಿದಾಗ ಹತ್ಯೆಯ ರಹಸ್ಯ ಬಲಯಾಗಿತ್ತು. ಜನವರಿ 15ರಂದು ರಮೇಶ್ ಕೋಣೆಯಲ್ಲಿ ಅವರ ಮಿತ್ರರೆಲ್ಲರೂ ಮದ್ಯಪಾನಕ್ಕಾಗಿ ಸೇರಿದ್ದಾರೆ. ಆಗ ವರ್ಮಾ ರಮೇಶ್ ಜತೆ ವಿನಾಕಾರಣ ಜಗಳ ತೆಗೆದಿದ್ದಾನೆ.ಜಗಳ ತಾರಕಕ್ಕೇರಿ ವರ್ಮಾ ರಮೇಶ್ ಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾನೆ, ಬಿಯರ್ ಬಾಟಲಿಯಲ್ಲಿ ಚುಚ್ಚಿ ಗಾಯಗೊಳಿಸಿದ್ದಾನೆ.

ಅವರ ಮಾಹಿತಿಯಂತೆ ವರ್ಮಾನನ್ನು ಪತ್ತೆ ಮಾಡಿ ಬಂಧಿಸಲಾಗಿದೆ, ಆರೋಪಿ ವರ್ಮಾ ಈಗ ಪೋಲೀಸರ ಮುಂದೆ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

No Comments

Leave A Comment