Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ನಾಶಿಕ್‌ ಬಳಿಕ ಭೀಕರ ರಸ್ತೆ ಅವಘಡ : ಮೂವರು ಪಾದಚಾರಿಗಳ ಸಾವು, ನಾಲ್ವರಿಗೆ ಗಾಯ

ನಾಶಿಕ್‌ : ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಕಲ್ವಾನ್‌ ಎಂಬಲ್ಲಿ ಬಹುವಿಧ ಬಳಕೆಯ ವಾಹನವೊಂದು ಢಿಕ್ಕಿ ಹೊಡೆದ ಕಾರಣ ಮೂವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಒಬ್ಬನಾಗಿರುವ 13ರ ಹರೆಯದ ಬಾಲಕನನ್ನು ಶುಭಂ ಬಾಪು ದೇವರೆ ಎಂದು ಗುರುತಿಸಲಾಗಿದೆ.

ನಂದೂರಿಗಢ ಉತ್ಸವದಲ್ಲಿ ಪಾಲ್ಗೊಳ್ಳಲು ನಾಲ್ವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರಿಗೆ ವಾಹನ ಢಿಕ್ಕಿ ಹೊಡೆಯಿತು. ಮೃತಪಟ್ಟಿರುವ ಮೂವರಲ್ಲಿ ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

ಈ ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment