Log In
BREAKING NEWS >
ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ಯುವಕನ ಕೊಚ್ಚಿಕೊಲೆ....ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ....

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ರಾಜಾಕಾಲುವೆ ಕುಸಿದು ಇಬ್ಬರು ಸಾವು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ರಾಜಕಾಲುವೆಯ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ.

ಪುಲಕೇಶಿ ನಗರದ ಬಿಜಿ ಗಾರ್ಡನ್ ಸಮೀಪ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸುದರ್ಶನ್ ಹಾಗೂ ಶಫೀಕ್ ಎಂಬುವವರು ಸಾವನ್ನಪ್ಪಿದ್ದಾರೆ.

ಮೃತರು ಜಾರ್ಖಂಡ್ ಮೂಲದ ಕಾರ್ಮಿಕರಾಗಿದ್ದು ಸುದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಶಫೀಕ್  ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಅಸುನೀಗಿದ್ದಾರೆ.

ಎಂಟು ಜನ ಕಾರ್ಮಿಕರು ಒಳಚರಂಡಿ ಕಾಮಗ್ರಿ ನಡೆಸುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಮೃತರ ಶವಗಳನ್ನು ಮರಣೋತರ ಪರೀಕ್ಷೆ ನಡೆಸಿದ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

No Comments

Leave A Comment