Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಬೈಕ್‌ ಮೂಲಕ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರರ ಪ್ಲ್ಯಾನ್?

ಶ್ರೀನಗರ: ಪುಲ್ವಾಮ ಮಾದರಿಯ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರ ಸಂಘಟನೆಗಳು ಸಿದ್ಧವಾಗಿವೆಯೇ? ಗುಪ್ತಚರ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇಂತಹದ್ದೊಂದು ದಾಳಿಗಳಾಗುವ ಸಾಧ್ಯತೆಗಳಿವೆ ಮತ್ತು ಈ ಬಾರಿ ಬೈಕನ್ನು ಬಳಸಿಕೊಂಡು ದಾಳಿಯನ್ನು ನಡೆಸಲು ಉಗ್ರಸಂಘಟನೆಗಳು ಯೋಜನೆ ಹಾಕಿಕೊಂಡಿವೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಗುಪ್ತಚರ ಮಾಹಿತಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಮೇರೆಗೆ ಖಾಸಗಿ ಸುದ್ದಿವಾಹಿನಿಯೊಂದು ಈ ವಿವರವನ್ನು ಬಹಿರಂಗಗೊಳಿಸಿದೆ.

ಗುಪ್ತಚರ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ, ಉಗ್ರರು ರಿಮೋಟ್‌ ಕಂಟ್ರೋಲ್‌ ಬಳಸಿ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪೋಟವೊಂದನ್ನು ನಡೆಸಲು ಸಂಚು ನಡೆಸಿರುವುದು ಗೊತ್ತಾಗಿದೆ. ಈ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಭದ್ರತಾ ಪಡೆಗಳು ಹೆದ್ದಾರಿಯುದ್ದಕ್ಕೂ ಭದ್ರತೆಯನ್ನು ಬಿಗಿಗೊಳಿಸಿವೆ ಮತ್ತು ಎಲ್ಲಾ ಭದ್ರತಾ ಪಡೆಗಳ ಜವಾನರನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಕರೆದೊಯ್ಯುವ ಸೇನಾ ವಾಹನಗಳು ಬೆಳಿಗ್ಗೆ 9 ಗಂಟೆಯ ಬಳಿಕವಷ್ಟೇ ಪ್ರಯಾಣಿಸಬೇಕೆಂದು ಆದೇಶಹೊರಡಿಸಿವೆ.

ಜಮ್ಮು ಕಾಶ್ಮೀರದ ಭಯೋತ್ಪಾದನಾ ನಿಗ್ರಹ ವಿಭಾಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನಿಖಾ ಮತ್ತು ಭದ್ರತಾ ದಳವು ಈ ಕುರಿತಾಗಿ ವರದಿಯೊಂದನ್ನು ಸಿದ್ಧಪಡಿಸಿದೆ. ಮತ್ತು ತನ್ನ ಆ ವರದಿಯಲ್ಲಿ ಅದು ಬಹಿರಂಗಗೊಳಿಸಿರುವ ಮಾಹಿತಿಗಳ ಪ್ರಕಾರ, ವಾಹನಗಳಲ್ಲಿರುವ ಕಳವು ನಿರೋಧಕ ಅಲಾರಾಂ ವ್ಯವಸ್ಥೆ ಅಥವಾ ಕೀಗಳು ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಸುಧಾರಿತ ನ್ಪೋಟಕಗಳನ್ನು ನ್ಪೋಟಿಸಲು ಉತ್ತಮ ಸಾಧನವಾಗಿ ಮಾರ್ಪಟ್ಟಿದೆ.

No Comments

Leave A Comment