Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಶೋಪಿಯಾನ್‌ ಎನ್‌ಕೌಂಟರ್‌ : ಭದ್ರತಾ ಪಡೆಗಳಿಂದ ಇಬ್ಬರು ಜೈಶ್‌ ಉಗ್ರರ ಹತ್ಯೆ

ಶ್ರೀನಗರ : ಅನೇಕ ನಾಗರಿಕರು ಮತ್ತು ಪೊಲೀಸ್‌ ಸಿಬಂದಿಗಳ ಕೊಲೆಯಲ್ಲಿ ಶಾಮೀಲಾಗಿದ್ದ ಇಬ್ಬರು ಜೈಶ್‌ ಎ ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆಗಳು ಇಂದು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಎನ್‌ಕೌಂಟರ್‌ ನಲ್ಲಿ ಹೊಡೆದುರುಳಿಸಿದವು.

ಹತ ಉಗ್ರರನ್ನು ಅಬೀದ್‌ ವಗಾಯ್‌ (ಶೋಪಿಯಾನ್‌ನ ರಾವಲಪುರ ನಿವಾಸಿ) ಮತ್ತು ಶಹಜಹಾನ್‌ ಮೀರ್‌ (ಅಮೇಶ್‌ಪುರ ಶೋಪಿಯಾನ್‌ ನಿವಾಸಿ) ಎಂದು ಗುರುತಿಸಲಾಗಿದೆ ಎಂದು ಪೊಲೀಸ್‌ ವಕ್ತಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಗಹಾಂದ್‌ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಇಂದು ಬೆಳಗ್ಗೆ ಯಶಸ್ವೀ ಎನ್‌ಕೌಂಟರ್‌ ನಡೆಸಿ ಇಬ್ಬರು ಜೈಶ್‌ ಉಗರನ್ನು ಹೊಡೆದುರುಳಿಸಿದವು ಎಂದು ವಕ್ತಾರ ಹೇಳಿದರು.

No Comments

Leave A Comment