Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಬಾಲಾಕೋಟ್‌ ಬಳಿಕ ಪಾಕಿಸ್ಥಾನದಿಂದ 513 ಬಾರಿ ಕದನ ವಿರಾಮ ಉಲ್ಲಂಘನೆ: ಸೇನೆ

ಜಮ್ಮು : ಪಾಕಿಸ್ಥಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಈ ತನಕ  513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತೀಯ ಪಡೆಗಳು ನೀಡಿರುವ ಜಬರ್‌ದಸ್ತ್ ಉತ್ತರದಲ್ಲಿ ಪಾಕ್‌ ಸೇನೆಯಲ್ಲಿ ಭಾರತಕ್ಕಿಂತ ಆರು ಪಟ್ಟು ಅಧಿಕ ಜೀವ ಹಾನಿ ಸಂಭವಿಸಿದೆ ಎಂದು ಹಿರಿಯ ಸೇನಾಧಿಕಾರಿ ಇಂದು ಶನಿವಾರ ತಿಳಿಸಿದ್ದಾರೆ.

ಈ ಕದನ ವಿರಾಮ ಉಲ್ಲಂಘನೆಯಲ್ಲಿ ಪಾಕ್‌ ಸೇನಾ ಪಡೆಗಳು ಮೋರ್ಟಾರ್‌ಗಳನ್ನು ಮತ್ತು ಆರ್ಟಿಲರಿ ಗನ್‌ಗಳನ್ನು ನೂರಕ್ಕೂ ಹೆಚ್ಚು ಬಾರಿ ಉಪಯೋಗಿಸಿವೆ. ಭಾರತೀಯ ಪ್ರಜೆಗಳನ್ನು, ಸೇನಾ ಹೊರಠಾಣೆಗಳನ್ನು ಗುರಿ ಇರಿಸಿ ಅದು ದಾಳಿ ಮಾಡಿದೆ; ಭಾರತೀಯ ಸೇನೆ ಪಾಕಿಗೆ ಅತ್ಯಂತ ತಕ್ಕುದಾದ ಜಬರ್‌ದಸ್ತ್ ಉತ್ತರವನ್ನೇ ನೀಡಿದೆ ಎಂದು ವೈಟ್‌ ನೈಟ್‌ ತುಕಡಿಯ ಜನರಲ್‌ ಆಫೀಸರ್‌ ಕಮಾಂಡಿಂಗ್‌ (ಜಿಓಸಿ), ಲೆ| ಜನರಲ್‌ ಪರಮ್‌ಜಿತ್‌ ಸಿಂಗ್‌ ಅವರಿಂದು ರಾಜೋರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

No Comments

Leave A Comment