Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಪಾಕಿಸ್ಥಾನದ ಕ್ವೆಟ್ಟಾ ಮಾರುಕಟ್ಟೆಯಲ್ಲಿ ಬಾಂಬ್‌ ಬ್ಲಾಸ್ಟ್‌ : 14 ಮಂದಿ ಸಾವು

ಕರಾಚಿ : ಇಂದು ಶುಕ್ರವಾರ ಬೆಳಗ್ಗೆ ಪಾಕಿಸ್ಥಾನದ ಕ್ವೆಟ್ಟಾ ನಗರದಲ್ಲಿನ ತರಕಾರಿ ಮಾರ್ಕೆಟ್‌ನಲ್ಲಿ ಸಂಭವಿಸಿದ ಬಾಂಬ್‌ ಬ್ಲಾಸ್ಟ್‌ ಗೆ 14 ಮಂದಿ ಬಲಿಯಾಗಿದ್ದು ಅನೇಕರು ಗಾಯಗೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಮೃತರಲ್ಲಿ ಕನಿಷ್ಠ ಏಳು ಮಂದಿ ಕ್ವೆಟ್ಟಾದ ಹಜಾರಿಗಂಜ್‌ ಪ್ರದೇಶದ ನಿವಾಸಿಗಳಾಗಿದ್ದಾರೆ. ಇದು ಬಲೂಚಿಸ್ಥಾನದ ಪ್ರಾಂತೀಯ ರಾಜಧಾನಿಯಾಗಿದ್ದು ಇಲ್ಲಿ ಹಜಾರಿ ಸಮುದಾಯದವರ ಬಾಹುಳ್ಯವಿದೆ.

ಬಾಂಬ್‌ ಸ್ಫೋಟದ ತೀವ್ರತೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಭದ್ರತಾ ಪಡೆಗಳು ಹೇಳಿರುವುದನ್ನು ಜಿಯೋ ನ್ಯೂಸ್‌ ವರದಿ ಮಾಡಿದೆ.

ಬಾಂಬ್‌ ಸ್ಫೋಟದ ತೀವ್ರತೆಯಲ್ಲಿ ತರಕಾರಿ ಮಾರುಕಟ್ಟೆಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳಿಗೂ ಹಾನಿ ಉಂಟಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳಿಗೆ ವಿವಿಧ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

No Comments

Leave A Comment