Log In
BREAKING NEWS >
ಮಂಗಳೂರಿನಲ್ಲಿ ಗುಡ್ಡ ಕುಸಿತ; ಹಲವು ಮನೆಗಳು ನೆಲಸಮ, ಮಣ್ಣಿನಡಿ ಸಿಲುಕಿರುವ ಮಕ್ಕಳಿಗಾಗಿ ರಕ್ಷಣಾ ಕಾರ್ಯಾಚರಣೆ...

ವ್ಯಾನ್‌ ಗೆ ಲಾರಿ ಢಿಕ್ಕಿಯಾಗಿ 6 ಸಾವು 9 ಜನ ಗಂಭೀರ

ಆಂಧ್ರಪ್ರದೇಶ: ಇಲ್ಲಿನ ಅನಂತಪುರ ಜಿಲ್ಲೆಯ ಯರ್ರಗುಂಟಪಲ್ಲಿ ಎಂಬಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವ್ಯಾನ್‌ ಗೆ ಲಾರಿಯೊಂದು ಢಿಕ್ಕಿಯಾಗಿರುವ ಘಟನೆ ವರದಿಯಾಗಿದೆ.

ಈ ಭೀಕರ ಅಪಘಾತದಲ್ಲಿ ವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದಾರೆ ಮಾತ್ರವಲ್ಲದೇ ಅದರಲ್ಲಿದ್ದ ಒಂಭತ್ತು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

No Comments

Leave A Comment