Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ, ಆಂಧ್ರ, ಸಿಕ್ಕಿಂ, ಒಡಿಶಾ ರಾಜ್ಯ ಆಸೆಂಬ್ಲಿ ಚುನಾವಣೆ

ನವದೆಹಲಿ:2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.ಬೆಳಗ್ಗೆಯಿಂದಲೇ  ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಗಳಿಗೆ  ಬಂದು ಮತ ಚಲಾಯಿಸುತ್ತಿದ್ದಾರೆ.

ನಿತಿನ್ ಗಡ್ಕರಿ, ಕಿರಣ್ ರಿಜಿಜು, ವಿಕೆ ಸಿಂಗ್ ಮತ್ತಿತರ ಕೇಂದ್ರ ಸಚಿವರ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

 

 

ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯೂ ಇಂದೇ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ 175, ಸಿಕ್ಕಿಂನಲ್ಲಿ 32 ಹಾಗೂ ಒಡಿಶಾದಲ್ಲಿ 28 ಸ್ಥಾನಗಳಿಗೆ ಲೋಕಸಭಾ ಚುನಾವಣೆಯ ಜೊತೆಯಲ್ಲಿಯೇ  ಆಸೆಂಬ್ಲಿ ಚುನಾವಣೆ ನಡೆಯುತ್ತಿದೆ.

2014ರಲ್ಲಿ ಆಂಧ್ರಪ್ರದೇಶ ವಿಭಜನೆ ನಂತರ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು,  25 ಲೋಕಸಭಾ ಹಾಗೂ 175 ಆಸೆಂಬ್ಲಿ ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆಯುತ್ತಿದೆ.  319 ಲೋಕಸಭಾ ಹಾಗೂ 2118 ವಿಧಾನಸಭಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕುಪ್ಪಂನಿಂದ, ಅವರ ಮಗ ನಾರಾ ಲೋಕೇಶ್  ಮಂಗಳಗಿರಿಯಿಂದ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಪುಲಿವೆಂದುಲಾದಿಂದ ಸ್ಪರ್ಧಿಸಿದ್ದಾರೆ.

ಇನ್ನೂ ತೆಲಂಗಾಣದ ಎಲ್ಲಾ 17 ಲೋಕಸಭಾ ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯುತ್ತಿದೆ. 443 ಅಭ್ಯರ್ಥಿಗಳು ಕಣದಲ್ಲಿದ್ದು, ನಿಜಮಾಬಾದ್ ನಲ್ಲಿ 185 ಅಭ್ಯರ್ಥಿಗಳ ಪೈಕಿ 170 ರೈತರೆ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಮುಖಂಡೆ ರೇಣುಕಾ ಚೌದರಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ,  ಕಾಂಗ್ರೆಸ್  ಪಕ್ಷದ ಎನ್ ಉತ್ತಮ್ ಕುಮಾರ್ ರೆಡ್ಡಿ, ಮತ್ತು ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರರಾವ್  ಪುತ್ರಿ ಸೇರಿದಂತೆ ಹಲವರು ಕಣದಲ್ಲಿದ್ದಾರೆ.ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ , ಹೊಸದಾಗಿ ರಚನೆಗೊಂಡಿರುವ ಎಸ್ಪಿ- ಬಿಎಸ್ಪಿ- ಆರ್ ಎಲ್ ಡಿ ಮೈತ್ರಿ ನಡುವಣ ತೀವ್ರ ಹೋರಾಟ ಕಂಡುಬರುತ್ತಿದೆ.

ಆರ್ ಎಲ್  ಡಿ ಮುಖ್ಯಸ್ಥ ಅಜಿಂತ್ ಸಿಂಗ್,   ಕೇಂದ್ರ ಸಚಿವ ವಿ. ಕೆ. ಸಿಂಗ್. ಮಹೇಶ್ ಶರ್ಮ ಮತ್ತಿತರ ಸ್ಪರ್ಧಿಸಿದ್ದಾರೆ.ಮಹಾರಾಷ್ಟ್ರದ ಏಳು, ಬಿಹಾರದ ನಾಲ್ಕು, ಅರುಣಾಚಲ ಪ್ರದೇಶದ ಎರಡು, ಅಸ್ಸಾಂನ 4, ಛತ್ತೀಸ್ ಗಡದ 1 ಲೋಕಸಭಾ ಕ್ಷೇತ್ರಗಳಲ್ಲಿ ಇಂದೇ ಮತದಾನ ನಡೆಯುತ್ತಿದೆ.  ಒಡಿಶಾದಲ್ಲಿ ನಾಲ್ಕು ಲೋಕಸಭಾ ಹಾಗೂ 28 ಆಸೆಂಬ್ಲಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 60 ಲಕ್ಷ ಮತದಾರರ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪಶ್ಚಿಮ ಬಂಗಾಳ, ಜಮ್ಮು- ಕಾಶ್ಮೀರ, ಮೇಘಾಲಯದಲ್ಲಿ ತಲಾ ಎರಡು , ಮೀಜೋರಾಂ, ತ್ರಿಪುರಾ, ಮಣಿಪುರ, ನಾಗಲ್ಯಾಂಡ್,  ಸಿಕ್ಕಿಂ,  ಅಂಡಮಾನ್ ಮತ್ತು ನಿಕೋಬಾರ್ , ಮತ್ತು ಲಕ್ಷದ್ವೀಪದ ತಲಾ 1 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಮತಗಟ್ಟೆಗಳಲ್ಲಿ ಬಿಗಿ ಬಂಧೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.

No Comments

Leave A Comment