Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬೆ.ಸೆಂಟ್ರಲ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಕಚೇರಿ ಮೇಲೆ ಐಟಿ ದಾಳಿ; ದಾಖಲೆಗಳ ವಶ

ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ.

ಇಂದು ಬೆಳ್ಳಂಬೆಳಗ್ಗೆಯೇ ಐಟಿ ಇಲಾಖೆ ಚುನಾವಣಾ ಆಯೋಗದ ಜೊತೆ ಜಂಟಿ ದಾಳಿ ನಡೆಸಿದ್ದು ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಅವರಿಗೆ ಸೇರಿದ ಕಚೇರಿ ಮೇಲೆ ದಾಳಿ ನಡೆಸಿ ಕಚೇರಿಯನ್ನು ತಮ್ಮ ವಶಕ್ಕೆ ಪಡೆದಿದೆ.

ಬೆಂಗಳೂರಿನ ಡಿಕನ್ಸನ್​ ರಸ್ತೆಯಲ್ಲಿರುವ ಕಾಂಗ್ರೆಸ್​​ ಚುನಾವಣಾ ಪ್ರಚಾರ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಕಚೇರಿಯಲ್ಲಿದ್ದ ಗನ್​ಮ್ಯಾನ್​, ಸಿಬ್ಬಂದಿಗಳು ಹಾಗೂ ಕಚೇರಿ ಉದ್ಯೋಗಿಗಳ ಮೊಬೈಲ್​, ಕಚೇರಿ ದೈನಂದಿನ ಡೈರಿ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ಚುನಾವಣೆ ವೇಳೆ ದಾಳಿ ನಡೆಸುವ ಮುನ್ನ ಐಟಿ ಇಲಾಖೆ, ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕೆಂದು ಆಯೋಗ ಸೂಚಿಸಿತ್ತು. ಈ ಸೂಚನೆ ನೀಡಿದ ಬೆನ್ನಲ್ಲೇ ನಡೆದಿರುವ ಜಂಟಿ ದಾಳಿ ಸಾಕಷ್ಟು ಕುತೂಹಲ ಮೂಡಿಸಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರಿಗೆ ಸೇರಿದ ಡಿಕನ್ಸನ್ ರಸ್ತೆಯಲ್ಲಿರುವ ಕಾಂಗ್ರೆಸ್​ ಪ್ರಚಾರ ಕಚೇರಿಯ ಜೊತೆಗೆ ರಿಜ್ವಾನ್​ ಆಪ್ತರಾಗಿರುವ ಮೂವರು ಉದ್ಯಮಿಗಳಾದ ಅಮಾನುಲ್ಲಾ ಖಾನ್​, ಖಮಲ್ ಪಾಷಾ ಹಾಗೂ ನಯೀಜ್ ಖಾನ್​ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.

ಪ್ಯಾಲೇಸ್​ ಡೆಕೋರೇಷನ್​ ಉದ್ಯಮ ನಡೆಸುತ್ತಿರುವ ಅಮಾನುಲ್ಲಾ ಖಾನ್​, ಗೋಲ್ಡನ್ ಆರ್ಚರಿ ಉದ್ಯಮಿ ಕಮಲ್ ಪಾಷಾ ಹಾಗೂ ರಿಯಲ್​ ಎಸ್ಟೇಟ್​ ಉದ್ಯಮಿ ನಯೀಜ್ ಖಾನ್​ ರಿಜ್ವಾನ್​ ಅರ್ಷದ್​​​ಗೆ ಆಪ್ತರಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.

No Comments

Leave A Comment