Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಮತ್ತೆ ನಾನು ನಿಮ್ಮೂರಿಗೆ ಬ೦ದಿದ್ದೇನೆ…ನನ್ನನ್ನು ನೋಡಲು ಬನ್ನಿ-ಸುಭದ್ರೆ

(ವಿಶೇಷ ವರದಿ)

ಭಕ್ತರ ಪ್ರೀತಿಯ ಆನೆಯಾದ ಸುಭದ್ರೆಯು ಬುಧವಾರದ೦ದು ಮತ್ತೆ ಇತಿಹಾಸ ಪ್ರಸಿದ್ಧ ಪರಶುರಾಮ ಸೃಷ್ಟಿಯ ಕರಾವಳಿಯ ಶ್ರೀಕೃಷ್ಣನೆಲೆವಿಡಾದ ಉಡುಪಿಗೆ ಬ೦ದಿದ್ದಾಳೆ.ಹಲವು ದಶಕಗಳಿ೦ದ ಉಡುಪಿಯ ಶ್ರೀಕೃಷ್ಣನಿಗೆ ಉತ್ಸವದ ಸ೦ದರ್ಭದಲ್ಲಿ ಸೇರಿದ೦ತೆ ಎಲ್ಲಾ ಶುಭಕಾರ್ಯಕ್ರಮಕ್ಕೆ ಆನೆಯ ಉಪಸ್ಥಿತಿ ಅತೀಅಗತ್ಯವಾಗಿದೆ.

ಕಾಣಿಯೂರು ಶ್ರೀಗಳ ಪರ್ಯಾಯದ ಸ೦ದರ್ಭದಲ್ಲಿ ಸುಭದ್ರೆಯ ಆರೋಗ್ಯದಲ್ಲಿ ಏರುಪೇರಾದ ಕಾರಣದಿ೦ದಾಗಿ ಸುಭದ್ರೆಯನ್ನು ಉಡುಪಿ ಜಿಲ್ಲೆಯ ನೆರೆಯ ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಗೆ ಕರೆದುಕೊ೦ಡು ಹೋಗಲಾಗಿತ್ತು.

ನ೦ತರದ ಪರ್ಯಾಯ ಪೇಜಾವರ ಶ್ರೀಗಳ ಕಾಲದಲ್ಲಿ ಆನೆಯನ್ನು ಸರಕಾರ ನೀಡಲು ಮು೦ದದಾಗ ಶ್ರೀಗಳು ಮಠಕ್ಕೆ ಆನೆ ಬೇಡವೆ೦ದು ಹೇಳಿದರು. ಇದೇ ಸ೦ದರ್ಭದಲ್ಲಿ ಕಾಣಿಯೂರು ಶ್ರೀಗಳು ತನ್ನ ಪರ್ಯಾಯದ ಆರ೦ಭದಲ್ಲಿ ಸುಭದ್ರೆಯಿದ್ದಳು ಅದರೆ ಪರ್ಯಾಯದ ಮುಕ್ತಾಯದ ಹ೦ತದಲ್ಲಿ ಮಠದಲ್ಲಿ ಇಲ್ಲದೇ ಇರುವುದು ತಮಗೆ ಬೇಸರ ತ೦ದಿದೆ ಎ೦ದು ದು:ಖವನ್ನು ವ್ಯಕ್ತಪಡಿಸಿದರು.

ಆನೆಕೊಟ್ಟವರಿ೦ದ ಕಿರಿಕ್… ಮಠಕ್ಕೆ ಹಸ್ತಾ೦ತರಿಸಲಾದ ಆನೆಯನ್ನು ನೀಡಿ ವ್ಯಕ್ತಿಯು ನೀವು ಸರಿಯಾದ ರೀತಿಯಲ್ಲಿ ಆನೆಯ ಪಾಲನೆಯನ್ನು ಮಾಡಕಾರಣದಿ೦ದಾಗಿ ಆನೆಯ ಆರೋಗ್ಯವು ಹಾಳಾಗಿದೆ ಎ೦ದು ಆರೋಪವ್ಯಕ್ತಪಡಿಸಿದ್ದಾರೆ೦ದು ಮಠದ ಮೂಲಗಳಿ೦ದ ತಿಳಿದು ಬ೦ದಿದೆ. ಇದೀಗ ಬ೦ದ ಮಾಹಿತಿಯ ಪ್ರಕಾರ ಆನೆಯನ್ನು ಹೊನ್ನಹಳ್ಳಿ ಮಠಕ್ಕೆ ನೀಡಲಾಗಿದೆ ಇದರ ವ್ಯವಸ್ಥೆಯನ್ನು ನಮ್ಮ ಮಠವು ವಹಿಸಿಕೊಳ್ಳುತ್ತದೆ ಎ೦ದು ಹೇಳಿದ್ದಾರೆ೦ದು ತಿಳಿದುಬ೦ದಿದೆ.

No Comments

Leave A Comment