Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

2ನೇ ಹಂತದ ಕಾದಾಟಕ್ಕೆ-ಅದೃಷ್ಟ ಪರೀಕ್ಷೆಗೆ 237 ಅಭ್ಯರ್ಥಿ ಸಜ್ಜು

ಬೆಂಗಳೂರು/ಹುಬ್ಬಳ್ಳಿ: ಎರಡನೇ ಹಂತದ ಚುನಾವಣೆಗೆ ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಿಗೆ ಅಖಾಡ ಸಜ್ಜಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ ಕ್ರಮ ಬದ್ಧವಾಗಿದ್ದ 282 ನಾಮಪತ್ರಗಳ ಪೈಕಿ 45 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮವಾಗಿ 237 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಡುವೆ ನೇರ ಕದನ ಏರ್ಪಟ್ಟಿದೆ.

ಎರಡನೇ ಹಂತದ 14 ಕ್ಷೇತ್ರಗಳ ಪೈಕಿ ಬೆಳಗಾವಿಯಲ್ಲಿ ಅತೀ ಹೆಚ್ಚು 57 ಮತ್ತು ರಾಯಚೂರಿನಲ್ಲಿ ಅತೀ ಕಡಿಮೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದಂತೆ ಚಿಕ್ಕೋಡಿಯಲ್ಲಿ 11, ಬಾಗಲಕೋಟೆಯಲ್ಲಿ 14, ವಿಜಯಪುರ 12, ಕಲಬುರಗಿ 12, ಬೀದರ್‌ 22, ಕೊಪ್ಪಳ 14, ಬಳ್ಳಾರಿ 11, ಹಾವೇರಿ 10, ಧಾರವಾಡ 19, ಉತ್ತರ ಕನ್ನಡ 13, ದಾವಣಗೆರೆ 25 ಮತ್ತು ಶಿವಮೊಗ್ಗದಲ್ಲಿ 12 ಅಭ್ಯರ್ಥಿಗಳು ಇದ್ದಾರೆ.

ಈ ಹಂತದಲ್ಲಿ ಕಾಂಗ್ರೆಸ್‌ನ ಮಲ್ಲಿ ಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ವಿ.ಎಸ್‌. ಉಗ್ರಪ್ಪರಂಥ ಪ್ರಮುಖರು ಅದಷ್ಟ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿಯಿಂದ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ, ಉಮೇಶ ಜಾಧವ ಮೊದಲಾದವರು ಕಣದಲ್ಲಿದ್ದಾರೆ.

No Comments

Leave A Comment